ಕೆಯ್ಯೂರು: ಸಾರ್ವಜನಿಕ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೇಸರಿ ಫ್ರೆಂಡ್ಸ್ ಸಂತೋಷ್ ನಗರ ಇದರ ಆಶ್ರಯದಲ್ಲಿ 10ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮವು ಸೆ.20 ರಂದು ಸಂತೋಷ್ ನಗರ ವಠಾರದಲ್ಲಿ ನಡೆಯಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಭಾದ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪಾನ ಸಮಿತಿ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕಲ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಿಕ್ಸೂಚಿ ಭಾಷಣವನ್ನು ಬಿ.ರವೀಂದ್ರ ರೈ ದಕ್ಷ ಕನ್ ಸ್ಟ್ರಕ್ಷನ್ ,ಅದ್ಯಕ್ಷ ಬಿ.ರವೀಂದ್ರ ರೈ ಮಾತಾಡಿ ,ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟ ಮಂಗಳೂರು ಉಪಾದ್ಯಕ್ಷರಾದ ಎಸ್.ಬಿ.ಜಯರಾಮ ರೈ ಬಳಜ್ಜ, ಕೆಯ್ಯೂರು ಗ್ರಾ.ಪಂ.ಅದ್ಯಕ್ಷರಾದ ಶರತ್ ಕುಮಾರ್ ಮಾಡಾವು, ಉಪಾಧ್ಯಾಕ್ಷರಾದ ಸುಮಿತ್ರಾ ದಿವಾಕರ ಪೂಜಾರಿ ಪಲ್ಲತ್ತಡ್ಕ, ಕೆಯ್ಯೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಜಯಂತಿ ಭಂಡಾರಿ ಮಾಡಾವು, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಬಾಲಕೃಷ್ಣ ರೈ ಮಾಡಾವು, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶ್ರೀ ದುರ್ಗಾ ಕೆಯ್ಯೂರು ನೃತ್ಯ ತಂಡ ಇವರಿಂದ ವೈವಿದ್ಯಮಯ ನೃತ್ಯ ರೂಪಕ, ರಾತ್ರಿ ಮ್ಯುಸಿಕಲ್ ನೈಟ್ ವಿತ್ ಯೂತ್ ಮೆಲೋಡಿಯಸ್ ಕುಡ್ಲ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸುಷ್ಮಾ.ಜೆ.ಶೆಟ್ಟಿ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪ್ರಾರ್ಥನೆಯೊಂದಿಗೆ ,ಗೀತಾ ಸ್ವಾಗತಿಸಿ, ಅನುಷಾ ವಂದಿಸಿ, ರವಿ ಕೈತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕೇಸರಿ ಫ್ರೇಂಡ್ಸ್ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸಹಕರಿಸಿದರು.