ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಕಾರ್ಯವ್ಯಾಪ್ತಿಗೊಳಪಟ್ಟ ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಬೆಳಂದೂರು ಮತ್ತು ಕಾಮಣ ಗ್ರಾಮದ ಸದಸ್ಯರ ಮನೆಯ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ.90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಗೌರವ ಧನದೊಂದಿಗೆ ನೀಡಿ ಸನ್ಮಾನಿಸಲಾಯಿತು.
ಪುರಸ್ಕಾರ ಪಡೆದ ವಿದ್ಯಾರ್ಥಿಗಳು:
ಮಂಗಳೂರು ವಿ.ವಿ. ಎಂ.ಕಾಂನಲ್ಲಿ 4 ನೇ ರ್ಯಾಂಕ್ ವಿಜೇತೆ ಶ್ರಾವ್ಯ ಎನ್.ಕೆ ಹಾಗೂ ಅತ್ಯಧಿಕ ಅಂಕವನ್ನು ಗಳಿಸಿದ ಎಸ್ಎಸ್ಎಲ್ಸಿ ವಿಭಾಗದ ವಿದ್ಯಾರ್ಥಿಗಳಾದ ಶ್ರೀವಿದ್ಯಾ, ಭವಿಷ್ಯ, ಅಜ್ಮಿಯತ್ ಸಫಾ, ಶ್ರಾವ್ಯ, ಸರೋಜ ಎನ್, ಅರ್ಜುನ್, ಮರಿಯಮ್ ರಫಾನ, ಶ್ರುಜನ, ಫಾತೀಮ ಆಫ್ರನ್, ವರ್ಷ ಪಿ. ವಿ, ಗಾಯನ್ ಆರ್. ಎಸ್, ಸೌಜನ್ಯ ಬಿ, ಮರ್ವ ಅಬ್ದುಲ್ ಸೊಂಪಾಡಿ, ರಜತ್ ಕೆ, ಆಯಿಷತ್ ತಸ್ಮಮಿಯ, ಯಶ್ವಿತ್ ಡಿ.ವಿ, ತುಷರ್ ಬೈತಡ್ಕ ಹಾಗೂ ಪಿಯುಸಿ ವಿಭಾಗ ವಿದ್ಯಾರ್ಥಿಗಳಾದ ದರ್ಶನ್, ಸಪ್ತಮಿ ಬಿ.ಪಿ, ಅಂಜಲಿ ಎ, ಕಿರಣ್, ಮಧುಶ್ರೀ ಕೆ.ಎಸ್, ಕ್ಷೀತಿ ಎಸ್ ಶೆಟ್ಟಿ, ವೃಷಿಕಾ, ನಿತೀಶ್, ಹರ್ಷಿತಾ ವಿ.ಪಿ, ಅನುಜ್ಞಾ ಎಂ, ವಿಕಾಸ್ ಎಂ.ವಿ, ಧನ್ಯಶ್ರೀ ಎ ಹಾಗೂ ರಕ್ಷಿತಾ ಕೆ ರವರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಎನ್. ಕುಮಾರಮಂಗಲ, ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕರುಗಳಾದ ಉದಯ ರೈ ಮಾದೋಡಿ, ಮಹಾಬಲ ಶೆಟ್ಟಿ ಕೊಮ್ಮಂಡ, ತಿಮ್ಮಪ್ಪ ಗೌಡ ಮುಂಡಾಳ, ಚೇತನ್ ಕುಮಾರ ಕೋಡಿಬೈಲು, ಸೋಮನಾಥ ಕನ್ಯಾಮಂಗಲ, ತನಿಯಪ್ಪ ನಾಯ್ಕ ಕಾರ್ಲಾಡಿ, ವೇದಾವತಿ ಕೆಡಂಜಿ, ನಿರ್ಮಲಾ ಕೇಶವ ಗೌಡ ಅಮೈ, ಪ್ರಕಾಶ್ ರೈ ಸಾರಕರೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ., ಉಪಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್. ರೈ, ಶಾಖಾ ವ್ಯವಸ್ಥಾಪಕ ಪಕೀರ ಎ ಹಾಗೂ ಸಂಘದ ಸಿಬ್ಬಂದಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.