ಉಪ್ಪಿನಂಗಡಿ: ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 3,59,475.31 ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ಗೌಡ ಎಸ್. ಘೋಷಿಸಿದರು.
ಸಂಘದ ಆವರಣದಲ್ಲಿ ಸೆ.22ರಂದು ನಡೆದ 2022-23ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ಸಾಲಿನಲ್ಲಿ ಸಂಘವು 2,77,256.9 ಲೀಟರ್ ಹಾಲನ್ನು ಸಂಗ್ರಹಿಸಿ, ಮಾರಾಟ ಮಾಡಿದ್ದು, ಹಾಲು ಉತ್ಪಾದಕರಿಗೆ 1,71,739 ರೂ. ಬೋನಸ್ ನೀಡಲು ತೀರ್ಮಾನಿಸಿದೆ. ನಮ್ಮ ಸಂಘವು ಅಡಿಟ್ ವರದಿಯಲ್ಲಿ ಸತತವಾಗಿ ಎ ಗ್ರೇಡ್ ಅನ್ನು ಪಡೆಯುತ್ತಿದೆ ಎಂದರು.
ಈ ಸಂದರ್ಭ ಸಂಘಕ್ಕೆ ಹೆಚ್ಚು ಹಾಲು ಪೂರೈಕೆ ಮಾಡಿದ ಹಾಲು ಉತ್ಪಾದಕರಾದ ಬೆಳಿಯಪ್ಪ ಬಿ. (ಪ್ರಥಮ), ಸಂಜೀವ ಬಿ. (ದ್ವಿತೀಯ) ಹಾಗೂ ರವಿ ಬಾಂತೋಟ (ತೃತೀಯ) ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಸಂಘದ ಎಲ್ಲಾ ಸದಸ್ಯರನ್ನು ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಶ್ಯಾಮ ಭಟ್ ಬಿ., ಬೆಳಿಯಪ್ಪ ಗೌಡ, ಕೊರಗಪ್ಪ ಕೆ., ಅಬೂಬಕ್ಕರ್ ಎ., ಪೂವಪ್ಪ ಕೆ., ಲೋಕಯ್ಯ ಗೌಡ, ಪದ್ಮಯ್ಯ ಪೂಜಾರಿ, ಶ್ರೀಮತಿ ಪ್ರಭಾವತಿ ಕೆ., ಶ್ರೀಮತಿ ಕಮಲ ಜಿ. ಉಪಸ್ಥಿತರಿದ್ದರು.
ಸಂಘದ ನಿರ್ದೇಶಕಿ ಶೀಲಾವತಿ ಕೆ. ಪ್ರಾರ್ಥಿಸಿದರು. ಉಪಾಧ್ಯಕ್ಷ ಸೋಮಶೇಖರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವರದಿ ಮಂಡಿಸಿ, ವಂದಿಸಿದರು. ಹಾಲು ಪರೀಕ್ಷಕ ಉಮೇಶ್ ಬಿ. ಸಹಕರಿಸಿದರು.