ಸಾಮರಸ್ಯವೇ ಭಾರತೀಯತೆಯ ತತ್ವ : ಶ್ರೀ ಮಹಾಬಲೇಶ್ವರ ಸ್ವಾಮೀಜಿ
ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಧರ್ಮವಲ್ಲ : ಅಹಮ್ಮದ್ ನೈಯಿಮ್ ಪೈಝಿ
ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿ ಮಾಡುವ ಕೆಲಸ ಆಗಬೇಕು : ರೆ| ಫಾ| ರೂಪೇಶ್ ರವೀನ್ ತಾವ್ರೋ
ಪುತ್ತೂರು: ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಆಶ್ರಯದಲ್ಲಿ ಪ್ರದೀಪ್ ಕುಮಾರ್ ರೈ ಪಾಂಬಾರು ಇವರ ಸಾರಥ್ಯದಲ್ಲಿ 8 ನೇ ವರುಷ ದ ವಿಜೃಂಭಣೆಯ ಸೌಹಾರ್ದ ಶ್ರೀ ಗಣೇಶೋತ್ಸವ ಕೊಳ್ತಿಗೆ ಗ್ರಾಮದ ಮೊಗಪ್ಪೆ ಮುತ್ತು ಮಾರಿಯಮ್ಮ ದೇವಾಲಯದ ಬಳಿ ಸೆ.19 ಮತ್ತು 20 ರಂದು ಸರ್ವಧರ್ಮ ಗಳ ಸಹಭಾಗಿತ್ವದಲ್ಲಿ ನಡೆಯಿತು. ಸೆ.೧೯ ರಂದು ಬೆಳಗ್ಗೆ ಜ್ಯೋತಿ ಬೆಳಗಿಸಿ ಶ್ರೀ ಗಣಪತಿ ವಿಗ್ರಹ ವನ್ನು ಪ್ರತಿಷ್ಠಾಪಿಸಿ, ಗಣಪತಿ ಹೋಮ ದ ಬಳಿಕ ಮಹಾಪೂಜೆ ನಡೆದು ಬಳಿಕ ಸಾಮೂಹಿಕ ಭೋಜನದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಮಧ್ಯಾಹ್ನ ದ ನಂತರ ಪ್ರಾಥಮಿಕ ಪ್ರೌಢಶಾಲಾ ವಿಧ್ಯಾರ್ಥಿಗಳಿಗಾಗಿ ಕಬಡ್ಡಿ ಪಂದ್ಯಾಟ ವನ್ನು ನಡೆಸಲಾಯಿತು. ಸಂಜೆ ಆರ್.ಪಿ ಕ್ರಿಯೇಷನ್ ಪಾಂಬಾರು ತಂಡದ ವತಿಯಿಂದ ವಿವಿಧ ವೇಷಭೂಷಣದ ಪ್ರದರ್ಶನಗಳ “ತುಳುನಾಡ ವೈಭವ ಕಾರ್ಯಕ್ರಮ” ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಸಾಮೂಹಿಕ ಭೋಜನ ನೆರವೇರಿತು.
ಸರ್ವಧರ್ಮಗಳ ಧರ್ಮಗುರುಗಳು ಭಾಗಿ
ಸೌಹಾರ್ದ ಸಭಾ ಕಾರ್ಯಕ್ರಮದಲ್ಲಿ ಕನ್ಯಾನ ಶ್ರೀ ಕ್ಷೇತ್ರ ಕಣಿಯಾರುನ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಾಚನ ನೀಡುತ್ತಾ ನಾವೆಲ್ಲರೂ ಕೂಡಿ ಬಾಳೋಣ. ಸಾಮರಸ್ಯವೇ ಭಾರತೀಯತೆಯ ತತ್ವ. ಹಿಂದಿನಿಂದಲೂ ನಾವೆಲ್ಲರೂ ಒಟ್ಟಾಗಿದ್ದೆವು. ನಾವೆಲ್ಲರೂ ಒಂದೇ ಎಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದರು. ಇನ್ನೊರ್ವ ವಿಶೇಷ ಅತಿಥಿಯಾಗಿದ್ದ ಅಬ್ದುಲ್ ಸಲಾಂ ಮೊಯಿನಿ ಸೌಹಾರ್ದತೆಯ ಸಂದೇಶವನ್ನು ನೀಡಿ ಶುಭಹಾರೈಸಿದರು.
ಸಂತ ಫಿಲೋಮಿನಾ ಕಾಲೇಜಿನ ಕ್ಯಾಪಸ್ ನಿರ್ದೇಶಕರಾದ ರೇ. ಫ಼ಾ. ಸ್ಟ್ಯಾನಿ ಪಿಂಟೋ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಸಂದೇಶವನ್ನು ನೀಡುತ್ತಾ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಚರಿಸುತ್ತಿರುವ ಫಿಲೋ ಗಣಪ ಕಾರ್ಯಕ್ರಮವನ್ನು ನೆನಪಿಸುತ್ತ ಸೌಹಾರ್ದ ಗಣೇಶೋತ್ಸವಕ್ಕೆ ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನ ಅರಂತೋಡು ಇದರ ಸ್ಥಾಪಕ ಅಧ್ಯಕ್ಷ ಟಿ ಎಂ ಶಹೀದ್ ಹಾಗೂ ರೈತ ಮಿತ್ರ ಕೂಟದ ಅಧ್ಯಕ್ಷ ಎಸ್ ಪಿ ಮುರಳೀಧರ ಕೆಮ್ಮಾರ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸೌಹಾರ್ದ ಸಮಿತಿಯ ಇದರ ಕಾರ್ಯಧ್ಯಕ್ಷ ರಾಮಚಂದ್ರ ಅಮಲ ತನ್ನ ಅಧ್ಯಕ್ಷೀಯ ಮಾತುಗಳಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಾಲಿಬಾಲ್ ಆಟಗಾರರಾಗಿರುವ ಶೇಖರ ಮೊಗಪ್ಪೆ ಇವರನ್ನು ಸನ್ಮಾನಿಸಲಾಯಿತು.
ಸೌಹಾರ್ದ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಪಾಂಬಾರ್ ಸ್ವಾಗತಿಸಿ, ಲೋಹಿತ್ ಬಾರಿಕೆ ವಂದಿಸಿದರು. ವಿನೋದ್ ರೈ ಕೆಳಗಿನಮನೆ ಕಾರ್ಯಕ್ರಮ ನಿರೂಪಿಸಿದರು. ೨೦ ರಂದು ನಡೆದ ಸೌಹಾರ್ದ ಸಭೆಯಲ್ಲಿ ಶ್ರೀ ಪ್ರದೀಪ್ ಕುಮಾರ್ ರೈ ಪಾಂಬಾರು ಇವರ ಅಧ್ಯಕ್ಷತೆಯನ್ನ ವಹಿಸಿದರು. ಕಲ್ಲುಗುಂಡಿ ಜುಮಾ ಮಸೀದಿಯ ಖತೀಬರಾದ ಜ| ಅಹಮ್ಮದ್ ನೈಯಿಮ್ ಪೈಝಿ ಮುಖ್ಯ ಸೌಹಾರ್ದ ಭಾಷಣಕಾರರಾಗಿ ಮಾತನಾಡಿ, ನಾನೊಬ್ಬ ನೈಜ ಮುಸಲ್ಮಾನ ನಾಗಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೆನೆ ಯಾಕೆಂದರೆ ನಾನು ಹಿಂದೂ ಧರ್ಮವನ್ನ ಪಾಲಿಸುವವನಾಗದಿದ್ದರು ಹಿಂದೂ ಧರ್ಮದ ಧಾರ್ಮಿಕ ಭಾವನೆಗಳನ್ನ ಗೌರವಿಸುವವನಾಗಿದ್ದೆನೆ, ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹತ್ತಿರದ ಮನೆ ಹಿಂದೂಗಳಗಿದ್ದರಿಂದ ನಾವು ಬಹಳಷ್ಟು ಪ್ರೀತಿ ಮತ್ತು ವಿಶ್ವಾಸದಿಂದ ಪರಸ್ಪರ ಅನ್ಯೋನ್ಯತೆಯಿಂದ ಬಾಳುತ್ತಿದ್ದೆವು, ಇತ್ತಿಚೀನ ದಿನಗಳಲ್ಲಿ ನಮ್ಮ ಈ ಕರಾವಳಿ ಪ್ರದೇಶ ಕೋಮು ಸೂಕ್ಷ್ಮ ಪ್ರದೇಶವಾಗಿದೆ, ಯಾರದ್ದೋ ರಾಜಕೀಯ ಹಿತ ಶಕ್ತಿಯಿಂದ ಅವರ ಬೆಳೆ ಬೇಯಿಸಿ ಕೊಳ್ಳಲು ಮುಗ್ಧ ಜನರ ಭಾವನೆಗಳನ್ನ ದಿಕ್ಕು ತಪ್ಪಿಸುತ್ತಿರುವುದು ಬಹಳಷ್ಟು ನೋವಿನ ಸಂಗತಿಯಾಗಿದೆ, ಒರ್ವ ನೈಜ ಮುಸಲ್ಮಾನನಾದವ ಯಾವತ್ತೂ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಸಾಧ್ಯವಿಲ್ಲ ಒಂದುವೇಳೆ ಅಂತಹ ಕೆಲಸವನ್ನ ಮಾಡಿದವನು ಪರಿಪೂರ್ಣ ಮುಸಲ್ಮಾನನಾಗಲು ಸಾಧ್ಯವಿಲ್ಲ ಎಂದರು.
ಮಂಗಳೂರು ಪ್ರಾಂತ್ಯದ ಪೋಪ್ ಅವರ ವಿಶ್ವಾದ್ಯಂತ ಪಾರ್ಥನಾ ಜಾಲದ ನಿರ್ದೇಶಕರಾದ ರೆ| ಫಾ| ರೂಪೇಶ್ ರವೀನ್ ತಾವ್ರೋ ಮಾತನಾಡಿ ನಾವು ಚಿಕ್ಕಂದಿನಿಂದಲೇ ಗಣೇಶೋತ್ಸವನ್ನು ನೋಡುತ್ತ ಬೆಳೆದವರು ನಮ್ಮ ಸಂತ ಫಿಲೋಮಿನ ಕಾಲೇಜಿನಲ್ಲಿಯು ಮಕ್ಕಳು ಸಂಭ್ರಮದಿಂದ ಗಣೇಶೋತ್ಸವನ್ನು ಆಚರಿಸುತ್ತಾರೆ ಅವರ ಸಂಭ್ರಮ ವನ್ನ ನೋಡುವಾಗ ನಮಗೆ ತುಂಬಾ ಸಂತೋಷವಾಗುತ್ತದೆ ನಮ್ಮೆಲ್ಲರ ಸೌಹಾರ್ದ ತೆ ಮುಂದಿನ ದಿನಗಳಲ್ಲಿ ಇನ್ನಷ್ಟೂ ಗಟ್ಟಿಯಾಗಲಿ ಎಂದು ಶುಭ ಹಾರೈಸಿದರು. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್ ವೆಂಕಟ್ರಮಣ ಗೌಡ, ಮಾಜಿ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ತೀರ್ಥಾನಂದ ದುಗ್ಗಳ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕ ಮೋಹನ್ ಗೌಡ ಪಡ್ರೆ ಇವರನ್ನ ಸನ್ಮಾನಿಸಲಾಯಿತು. ಸಂಜೆ ಸಂಗೀತರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರು ಸಾರಥ್ಯದಲ್ಲಿ ಗಾನ ನೃತ್ಯ-ರಸಮಂಜರಿ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ದೇವಿ ಫ್ರೆಂಡ್ಸ್ ಕೆಮ್ಮಾರ ಇವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ ಗಳೊಂದಿಗೆ ಆಕರ್ಷಕ ಸಿಡಿಮದ್ದು ಪ್ರದರ್ಶನ ಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆಯಿತು.