ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸಂತ ಅಂತೋನೀಸ್ ವಿದ್ಯಾಸಂಸ್ಥೆಗಳು ಉದನೆ ಇಲ್ಲಿ ಸೆಪ್ಟಂಬರ್ 21ರಂದು ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 17 ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ. 17 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 10ನೇ ತರಗತಿಯ ದೃಶ್, ಸೌರವ್ ಜಿ ಆಳ್ವ, ಸಾತ್ವಿಕ್, ಯಶಸ್ಸ್,ಮೊಹಮ್ಮದ್ ರಹೀಫ್, ಹೃಷಿಕೇಶ್, 9ನೇ ತರಗತಿಯ ಆಕಾಶ್ ರೈ, ಅಕ್ಷಜ್ ಶೆಟ್ಟಿ, ಅನೂಪ್ ಸಿಂಗ್, ಜಿತೇಶ್, ತನ್ವಿತ್, ಅಹಮ್ಮದ್ ಶಬೀರ್, ಪುನೀತ್, ಮೋಹಿತ್ ಡಿ ಗೌಡ, ೮ನೇ ತರಗತಿಯ ಚಿಂತನ್ ಕೆ. ಸಿ ಭಾಗವಹಿಸಿರುತ್ತಾರೆ. 17 ರ ವಯೋಮಾನದ ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ 10ನೇ ತರಗತಿಯ
ಅಮತನೂರು ಸಲೀಂ, ಹನ್ಸೀನ ಹಾರೂನ್, 9ನೇ ತರಗತಿಯ ಹನಾನ್ ಹಾರೂನ್, ಪ್ರಾಪ್ತಿ ಪಿ ಶೆಟ್ಟಿ, ಕೃಪಾ, ವನಿಷಾ, ಸೃಜನಾ ಸಿ. ಟಿ, ಸೃಷ್ಠಿ ಜೈನ್, ಪ್ರಣೀಕ್ಷಾ, ವೃದ್ಧಿ, ೮ನೇ ತರಗತಿಯ ತನ್ವಿ, ಅನ್ವಿ ರ್ಆಚಾರ್ಯ, ಸವ್ಯ, ಸೃಷ್ಠಿ. ಕೆ ಭಾಗವಹಿಸಿರುತ್ತಾರೆ. ಅಮತನೂರು ಸಲೀಂ ಉತ್ತಮ ಎಸೆತಗಾರರಾಗಿ,ಮೊಹಮ್ಮದ್ ರಹೀಫ್ ಉತ್ತಮ ಹಿಡಿತಗಾರನಾಗಿ,ಸಾತ್ವಿಕ್ ಸವ್ಯಸಾಚಿ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ
ವಿದ್ಯಾ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.