ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ, ದ.ಕ. ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ , ಓಂಕಾರ ನಗರ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ನಡೆದ 17 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕಡಮಜಲು ಸುಭಾಸ್ ರೈ ರವರು ಮಾತನಾಡಿ ʻಸಾರ್ವಜನಿಕರನ್ನು ಒಂದುಗೂಡಿಸಲು ಮಾಡಿದ ಗಣೇಶೋತ್ಸವ, ಇಂದು ಗಣಪತಿಯ ಆರಾಧನೆಯ ಮಹತ್ವದ ಬಗ್ಗೆ ಚಿಂತನೆ ಮಾಡಿಕೊಳ್ಳಬೇಕಾಗಿದೆʼ ಎಂದರು. ಪ್ರಜಾಪ್ರಭುತ್ವದ ಉಳಿವು, ದೇಶಭಕ್ತಿಯ ಉದ್ದೀಪನಕ್ಕಾಗಿ ಗಣಪತಿಯ ಆರಾಧನೆ ಮುಖ್ಯವಾಗಿದೆ. ಗಣಪತಿಯ ವಿಗ್ರಹದ ವಿಸರ್ಜನೆ ಜೊತೆಗೆ ನಮ್ಮ ಷಡ್ವೈರಿಗಳನ್ನು ವಿಸರ್ಜನೆ ಮಾಡಬೇಕು. ಸಮಾಜದಲ್ಲಿ ಸಮಚಿತ್ತದಿಂದ ಬದುಕಬೇಕು. ಸಮಾಜದಲ್ಲಿ ಸತ್‌ಬುದ್ದಿಯಿಂದ ಬದುಕುವ ರೀತಿಯ ಯೋಗಭಾಗ್ಯ ನೆಮ್ಮೆಲ್ಲರಿಗೂ ಕೂಡಿಬರಲಿ. ಕೃಷಿಯಲ್ಲಿ ಸಂತೃಪ್ತ ಜೀವನ ನಡೆಸಿದವನು ನಾನು. ರೈತ ದೇವೋಭವ ಎಂಬ ಯೋಗ ಕೂಡಿ ಬರಲಿ. ಮಣ್ಣನ್ನು ಬಂಗಾರವಾಗಿಸುವವನು ರೈತ. ವಿದ್ಯಾವಂತರಾದ ನಾವೆಲ್ಲಾ ಕೃಷಿಯಲ್ಲಿ ತೊಡಗಿಸಿಕೊಂಡು ಮಣ್ಣಿನ ಸತ್ವವನ್ನು ಹೆಚ್ಚಿಸೋಣʼ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ವಿದಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.