ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶುಭಲತಾರಿಗೆ ಅಭಿನಂದನೆ

0

ಪುತ್ತೂರು: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಆನಡ್ಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶುಭಲತಾರವರನ್ನು ಆನಡ್ಕ ಬಿಲ್ಲವ ಗ್ರಾಮ ಸಮಿತಿ ಹಾಗೂ ಮರಕ್ಕೂರು ಕ್ಷೇತ್ರ ಬಳಗದಿಂದ ಗೌರವಿಸಲಾಯಿತು. ಶುಭಲತಾ ಅವರು ವಿಶೇಷ ಬದ್ಧತೆಯಿಂದ ಸೇವೆ ಸಲ್ಲಿಸಿ ಶಾಲೆಯ ಪ್ರಗತಿಗೆ ಶ್ರಮಿಸಿ, 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಅರ್ಹವಾದ ಕಾರಣ ಸನ್ಮಾನಿಸಲಾಯಿತು. ನಾರಾಯಣ ಸುವರ್ಣ, ವಿನಯ ಮರಕ್ಕೂರು, ಕಿಟ್ಟಣ್ಣ ಪೂಜಾರಿ, ಜಯನಂದ ಪೂಜಾರಿ, ನೀಲಪ್ಪ ಪೂಜಾರಿ, ವನಜಾಕ್ಷಿ, ರತ್ನಾವತಿ, ದಿವ್ಯಾ, ಗೀತಾ, ಇಂದಿರಾ, ರೇಣುಕಾ, ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಶಿಕ್ಷಕ, ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here