ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ವತಿಯಿಂದ ಸತ್ಯನಾರಾಯಣ ಪೂಜೆ , ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಸೆ.24ರಂದು ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಬಳಿಕ ವಾರ್ಷಿಕ ಮಹಾಸಭೆ ನಡೆಯಿತು.

ಪ್ರಗತಿ ಸ್ಟಡಿ ಸೆಂಟರಿನ ಮುಖ್ಯಸ್ಥ ಗೋಕುಲ್ ನಾಥ್ ಪಿ.ವಿ ಮಾತನಾಡಿ, ತೀಯಾ ಸಮಾಜ ಸೇವಾ ಸಮಿತಿಯ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ.ಸಮಾಜದ ಎಲ್ಲರೂ ಸಂಘಟನೆಯೊಂದಿಗೆ ಸೇರಿದರೆ ಸಂಘಟನೆಯು ಶಕ್ತಿಯುತವಾಗುತ್ತದೆ. ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಮುಂದೆ ಬಂದು ಪ್ರಗತಿಯನ್ನು ಕಾಣಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತೀಯಾ  ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ನೆಹರುನಗರ  ಮಾತನಾಡಿ, ಸಮಾಜದ ಎಲ್ಲಾ ಬಂಧುಗಳ ಸಹಕಾರದಲ್ಲಿ ತೀಯಾ ಸಮಾಜ ಸೇವಾ ಸಮಿತಿಯ ವತಿಯಿಂದ ಸಂಘಟನೆಯ ದೃಷ್ಟಿಯಿಂದ ಹಲವು ಕಾರ್ಯಕ್ರಮ ನಡೆಸಲಾಗಿದೆ.ಸಂಘಟನೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ವೇದಿಕೆಯಲ್ಲಿ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಸಾಲ್ಮರ, ,ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ,ಕೋಶಾಧಿಕಾರಿ ಬಿ.ಎಂ. ಶ್ರೀಧರ್ ,ಮಹಿಳಾ ಘಟಕದ ಅಧ್ಯಕ್ಷೆ ಸಂದ್ಯಾ ರಾಜೇಶ್ , ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ , ಎಣ್ಮೂರು -ನಿಂತಿಕಲ್ಲು ತೀಯಾ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ ,ಅಭಿನಂದನೆ
ಕಾರ್ಯಕ್ರಮದಲ್ಲಿ ತೀಯಾ ಸಮಾಜದ ಎಸ್.ಎಸ್.ಎಲ್.ಸಿ ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡೆ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ  ತೀಯಾ ಸಮಾಜದ ಮಾಸ್ಟರ್ ಅಮನ್ ರಾಜ್,  ಶಶಿಧರ್ ಬೆಳ್ಳಾರೆ, ವಿಜಯಕುಮಾರ್ ಕೆ ಬಿ ,ಹಾಗೂ  ಪದ್ಮಿನಿ ಯತಿಂದ್ರನಾಥ ಇವರನ್ನು ಸನ್ಮಾನಿಸಲಾಯಿತು.

ತೀಯಾ ಸಮಾಜ ಸೇವಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಪುರುಷೋತ್ತಮ ಕೇಪುಳು ಇವರು ಸ್ವಾಗತಿಸಿ, ಪ್ರಸ್ತಾವನೆಗೈದರು ಪ್ರಧಾನ ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ಇವರು 2022-23ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ ವಿ. ಅವರು ವಂದಿಸಿದರು. ಕೋಶಾಧಿಕಾರಿ ಬಿ.ಎಂ. ಶ್ರೀಧರ್ ಅವರು 2022 23ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು . ಮಲ್ಲಿಕಾ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಘಟಕದಿಂದ ದೀಪಾವಳಿ ಆಚರಣೆ

ತೀಯಾ ಸಮಾಜ ಸೇವಾ ಸಮಿತಿಯ ಮಹಿಳಾ ಘಟಕದಿಂದ ದೀಪಾವಳಿ ಆಚರಣೆ ನಡೆಸುವ ಯೋಜನೆ ಹಾಕಿಕೊಂಡಿದ್ದು, ಸಮಾಜದ ಎಲ್ಲಾ ಬಾಂಧವರು ಪಾಲ್ಗೊಳ್ಳುವಂತೆ ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ರಾಜೇಶ್‌ ,ಕಾರ್ಯದರ್ಶಿ ಪ್ರಭಾವತಿ ವಿ. ಅವರು ತಿಳಿಸಿದರು.

LEAVE A REPLY

Please enter your comment!
Please enter your name here