ಆರ್ಲಪದವು : 34 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪಾಣಾಜೆ : ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಅಕ್ಟೋಬರ್ 24 ರಂದು ನಡೆಯಲಿರುವ 34 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆರ್ಲಪದವಿನ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಸೆಪ್ಟೆಂಬರ್ 24 ರಂದು ಬೆಳಿಗ್ಗೆ ಜರುಗಿತು.ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷರಾದ ಜಯಶ್ರೀ ದೇವಸ್ಯ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.


ಗ್ರಾ.ಪಂ. ಸದಸ್ಯರಾದ ಮೋಹನ ನಾಯ್ಕ ತೂಂಬಡ್ಕ, ಭಾರತಿ ಭಟ್ ದೇವಸ್ಯ,ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಡಾ.ಅಖಿಲೇಶ್ ಪಿ.ಎಂ ಅರ್ಧಮೂಲೆ, ನಿರ್ದೇಶಕರಾದ ರವೀಂದ್ರ ಭಂಡಾರಿ ಬೈಂಕ್ರೋಡು, ರವಿಶಂಕರ್ ಶರ್ಮ ಬೊಳ್ಳುಕಲ್ಲು, ಪಾಣಾಜೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಉಮೇಶ್ ಬಲ್ಯಾಯ ಪಾಣಾಜೆ , ನಿರ್ದೇಶಕರಾದ ಸಂತೋಷ್ ರೈ ಗಿಳಿಯಾಲು, ಯತೀಶ್ ರೈ ಪಡ್ಯಂಬೆಟ್ಟು, ಆರ್ಲಪದವು ಶ್ರೀ ಕಾರ್ತಿಕೇಯ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶಾರದಾ ಗೋಪಾಲ್ ಕೊಂದಲ್ಕಾನ, ಕಾರ್ಯದರ್ಶಿಯಾದ ಸುಜಾತ ಬಟ್ಯ ಮಾಸ್ಟರ್, ಸದಸ್ಯರಾದ ದುರ್ಗಾಂಭಿಕಾ ಶ್ರೀಧರ ಆಳ್ವಾ,ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ರಘುನಾಥ ಪಾಟಾಳಿ ಅಪಿನಿಮೂಲೆ, ಪ್ರಧಾನ ಕಾರ್ಯದರ್ಶಿ ಸುಭಾಸ್ ರೈ ಚಂಬರಕಟ್ಟ, ಸದಸ್ಯರಾದ ನಾರಾಯಣ ಪೂಜಾರಿ ತೂಂಬಡ್ಕ, ಮನೋಜ್ ರೈ ಸೂರಂಬೈಲು, ಬಾಲಕೃಷ್ಣ ರೈ ಸೂರಂಬೈಲು, ರಾಧಾಕೃಷ್ಣ ತೂಂಬಡ್ಕ, ಜಯರಾಮ ರೈ ಚಂಬರಕಟ್ಟ, ಸಂತೋಷ್ ರೈ ಗೋಳಿತ್ತಡಿ, ಶ್ರೀಹರಿ ನಡುಕಟ್ಟ ಉಪಸ್ಥಿತರಿದ್ದರು.

ಅಕ್ಟೋಬರ್ 24 ರಂದು ನಡೆಯಲಿರುವ ಒಂದು ದಿನದ ಶಾರದೊತ್ಸವದ ಕಾರ್ಯಕ್ರಮದಲ್ಲಿ ಭಜನಾಕಾರ್ಯಕ್ರಮ, ಅಕ್ಷರಾರಂಭ, ಆಯುಧ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರವೀಶ್ ಪಡುಮಲೆಯವರಿಂದ ಧಾರ್ಮಿಕ ಉಪನ್ಯಾಸ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8ನೇ ತರಗತಿ ವಿದ್ಯಾರ್ಥಿನಿ ಆಪ್ತಚಂದ್ರಮತಿ ಮುಳಿಯ ರವರಿಂದ ಸರಸ್ವತಿ ನಮಸ್ತುಭ್ಯಂ ಎಂಬ ಹರಿಕಥೆ,ಬೆಟ್ಟಂಪಾಡಿ ಪ್ರಿಯದರ್ಶಿನಿ ಸಾಂಸ್ಕೃತಿಕ ಕಲಾ ತಂಡದಿಂದ ಪುಣ್ಯ ಭೂಮಿ ಭಾರತ ಎಂಬ ನೃತ್ಯ ವೈಭವ,ಅಮ್ಮ ಕಲಾವಿದೆರ್ ಕುಡ್ಲ ತಂಡದವರಿಂದ ತುಳು ಹಾಸ್ಯಮಯ ನಾಟಕ ‘ಅಮ್ಮೆರ್’ ಹಾಗೂ ಸಂಜೆ ವೇಳೆ ಸಿಂಗಾರಿಮೇಳ , ವಿಶೇಷ ಸುಡುಮದ್ದು ಪ್ರದರ್ಶನದೊಂದಿಗೆ ವಿಜೃಂಭಣೆಯಿಂದ ಶೋಭಾಯಾತ್ರೆಯು ಆರ್ಲಪದವಿನಿಂದ ಕೊಂದಲ್ಕಾನ ಶಾರದಾ ನದಿಯವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here