ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ 2022-23ನೇ ಸಾಲಿನ ಮಹಾಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಸೆ.24ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಮಾತನಾಡಿ, ಸಂಘವು ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡಿದೆ. 1 ವರ್ಷದ ಅವಧಿಯಲ್ಲಿ 6.70 ಕೋಟಿ ರೂ., ವ್ಯವಹಾರ ನಡೆಸಿ, 24.65 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೈತನ್ಯ ಅವರು ವರದಿ ಮಂಡಿಸಿ, 2022-23ನೇ ಸಾಲಿನ ಆರು ತಿಂಗಳು ಅವಧಿಯಲ್ಲಿ ಸಂಘ ನಡೆಸಿದ ವ್ಯವಹಾರದ ವರದಿಯನ್ನು ವಾಚಿಸಿದರು. ಸಂಘವು ಆರು ತಿಂಗಳಲ್ಲಿ 3,96,26,505 ರೂ.ವ್ಯವಹಾರ ನಡೆಸಿದ್ದು 3,95,136 ರೂ. ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ 718 ಎ ತರಗತಿ ಸದಸ್ಯರಿದ್ದು ಒಟ್ಟು 14,26,500 ರೂ. ಪಾಲು ಬಂಡವಾಳವಿದೆ. ಸಿ ತರಗತಿಯ ಸದಸ್ಯರ 1,16,400 ರೂ.ಪಾಲು ಬಂಡವಾಳವಿದೆ. ವರದಿ ವರ್ಷದಲ್ಲಿ 8,30,18,905 ರೂ.ಠೇವಣಿ ಸಂಗ್ರಹಿಸಿ 4,62,93,009 ರೂ., ವಿತರಣೆಯಾಗಿದೆ. ವರದಿ ವರ್ಷದಲ್ಲಿ 3,97,09,576 ರೂ.,ಸಾಲ ವಿತರಿಸಲಾಗಿದ್ದು 92,92,747 ಜಮೆಯಾಗಿದೆ. 40 ಕಾಮಧೇನು ಸ್ವಸಹಾಯ ಸಂಘ ರಚಿಸಲಾಗಿದೆ ಎಂದು ತಿಳಿಸಿದರು.


ಉಪಾಧ್ಯಕ್ಷೆ ಮೇಘನಾ ಶೈನ್, ನಿರ್ದೇಶಕರಾದ ಶ್ರೀಲತಾ ಸಿ.ಎಚ್., ರತಿ ಡಿ., ವಾರಿಜಾಕ್ಷಿ, ಮೈತ್ರಿ, ವಿನೀತಾ ಎಂ.ಬಿ., ಪ್ರವಿಣಿ, ಶಾಲಿನಿ, ಸಂಪಾವತಿ, ಜಯಂತಿ, ಡೈಸಿ ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿ ಸಂಘದ ನಿಧಿಗಳ ವಿಂಗಡಣೆಯನ್ನು ಶುಭಲಕ್ಷ್ಮಿ ವಾಚಿಸಿದರು. 2023-24ನೇ ಸಾಲಿನ ಆಯವ್ಯಯ ಬಜೆಟನ್ನು ಹರ್ಷಿತ ವಾಚಿಸಿದರು. ನಿರ್ದೇಶಕಿ ಜಯಂತಿ ಬಿ.,ಸ್ವಾಗತಿಸಿದರು. ಆರು ತಿಂಗಳ ಕಾಲ ವ್ಯವಹಾರ ನಡೆಸಿದ ಸಂಘದ ಎ ತರಗತಿಯ ಸದಸ್ಯರಿಗೆ ಉಡುಗೊರೆ ನೀಡಲಾಯಿತು.

ಅಭಿನಂದನಾ ಕಾರ್ಯಕ್ರಮ:
ಮಹಾಸಭೆಯ ನಂತರ ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಯಾಗಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಸೆಲಿನಾ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ಕೆ.ಯಂ., ನಿವೃತ್ತ ಮುಖ್ಯಗುರು ಸುಗಂಧಿ ಕೆ., ನೆಲ್ಯಾಡಿ ದುರ್ಗಾಶ್ರೀ ಫೈನಾನ್ಸ್‌ನ ಸತೀಶ್ ಕೆ.ಎಸ್.ದುರ್ಗಾಶ್ರೀ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಆರಂಭದಿಂದಲೂ ಸಲಹೆ ಸೂಚನೆ, ಮಾರ್ಗದರ್ಶನ ನೀಡಿ ಸಂಸ್ಥೆ ಬೆಳೆಯಲು ಸಹಕರಿಸಿದ ಸಹಕಾರ ಇಲಾಖೆಯ ಅಧಿಕಾರಿ ತ್ರಿವೇಣಿ ರಾವ್‌ರವರನ್ನು ಸನ್ಮಾನಿಸಲಾಯಿತು. ಅವರ ಹುಟ್ಟುಹಬ್ಬವನ್ನು ಇದೇ ವೇಳೆ ಆಚರಿಸಲಾಯಿತು. ಸಹಕಾರಿ ಸಂಘ ಸಂಸ್ಥೆಗಳಿಗೆ ಹಾಗೂ ಸಂಘದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಹಾಪೋಷಕರಿಗೆ, ಪೋಷಕರಿಗೆ, ಸಂಸ್ಥೆಯ ಬೆನ್ನೆಲುಬಾಗಿರುವವವರನ್ನು ಸನ್ಮಾನಿಸಿ ಉಡುಗೊರೆ ನೀಡಿ ಗೌರವಿಸಲಾಯಿತು. 15 ಮಂದಿ ಉತ್ತಮ ಗ್ರಾಹಕರಿಗೆ ಉಡುಗೊರೆ ನೀಡಲಾಯಿತು. ಬಡ ಮಹಿಳೆಯರಿಗೆ ಅಕ್ಕಿ ಮತ್ತು ಸೀರೆ ವಿತರಿಸಲಾಯಿತು.


ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶೀನಪ್ಪ ಉದನೆ, ಚೆನ್ನಪ್ಪ ಗೋಳಿತ್ತೊಟ್ಟು, ಶಶಿಧರ್ ಗೋಳಿತ್ತೊಟ್ಟು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಮಾನಸ, ತಿರ್ಲೆ ಭಜನಾ ಮಂಡಳಿ ಅಧ್ಯಕ್ಷ ನೋಣಯ್ಯ ಪೂಜಾರಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಜಯಲಕ್ಷ್ಮೀ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here