ಅಕ್ರಮ ಜಾನುವಾರು ಸಾಗಾಟ -ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದ ಸುಬ್ರಹ್ಮಣ್ಯ ಪೊಲೀಸರು

0

ಸುಬ್ರಹ್ಮಣ್ಯ : ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದ ವಾಹನವನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆಪಡೆದ ಘಟನೆ ಸೆ.24 ರಂದು ರಾತ್ರಿ ಐವತ್ತೊಕ್ಲು ಗ್ರಾಮದ ಕುಳ್ಳಕೋಡಿಯಿಂದ ವರದಿಯಾಗಿದೆ.

ಸೆ.24 ರಂದು ರಾತ್ರಿ ಐವತ್ತೊಕ್ಲು ಗ್ರಾಮದ ಕುಳ್ಳಕೋಡಿ ಎಂಬಲ್ಲಿ 5 ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ರಸ್ತೆಯಲ್ಲಿ ಸಿಲುಕಿ ಮುಂದಕ್ಕೆ ಹೋಗದೆ ಬಾಕಿಯಾಗಿತ್ತು ಎನ್ನಲಾಗಿದೆ.ಬಳಿಕ ಪಿಕಪ್ ನಲ್ಲಿ ಇದ್ದವರು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ರೂ 20,000/- ಮೌಲ್ಯದ ಜಾನುವಾರುಗಳನ್ನು ಹಾಗೂ ಅಂದಾಜು ರೂ 2,00,000/ ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ  : 69/2023 ಕಲಂ: 379 ಐಪಿಸಿ ಮತ್ತು ಕಲಂ:  5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here