ಬಡಗನ್ನೂರು:ಗುರುಪ್ರಸಾದ್ ರೈ ಮನೆಯಲ್ಲಿ ನಡೆದ ದರೋಡೆ ಪ್ರಕರಣ-ಓರ್ವ ಆರೋಪಿ ಕೇರಳದಲ್ಲಿ ಪೊಲೀಸ್ ವಶಕ್ಕೆ?

0

ಪುತ್ತೂರು:ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಡುವನ್ನೂರು ಗ್ರಾಮದ ಗುರುಪ್ರಸಾದ್ ರೈ ಅವರ ಕುದ್ಕಾಡಿಯ ಮನೆಯಲ್ಲಿ ಸೆ.6ರಂದು ತಡರಾತ್ರಿ ನಡೆದಿರುವ ದರೋಡೆ ಪ್ರಕರಣ ಭೇದಿಸಲು ಅಹರ್ನಿಶಿ ಶ್ರಮಿಸುತ್ತಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಓರ್ವ ಆರೋಪಿಯನ್ನು ಕೇರಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿಹರಡಿದೆ.ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ.


ಸೀತಂಗೋಳಿ ನಿವಾಸಿ ವಶಕ್ಕೆ:
ಪ್ರಕರಣದ ಪತ್ತೆಗಾಗಿ ಪೊಲೀಸರ ಒಂದು ತಂಡ ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಇದೀಗ ಸೀತಂಗೋಳಿ ಮೂಲದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆತನನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರಿಗೆ ಇತರ ಆರೋಪಿಗಳ ಕುರಿತೂ ಸುಳಿವು ಲಭಿಸಿದ್ದು ಒಂದೆರಡು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳೂ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಏಳೆಂಟು ಮಂದಿ ಆರೋಪಿಗಳು ಭಾಗಿ?:
ಐವರು ದರೋಡೆಕೋರರ ತಂಡ ಗುರುಪ್ರಸಾದ್ ರೈಯವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಾದರೂ ಒಟ್ಟು ಈ ಕೃತ್ಯದ ಹಿಂದೆ ಸುಮಾರು ಏಳೆಂಟು ಆರೋಪಿಗಳು ಭಾಗಿಯಾಗಿದ್ದಾರೆನ್ನುವ ಸಂಶಯವಿದೆ.

ನಿರಂತರ ಕಾರ್ಯಾಚರಣೆ:
ಸೆ.6ರಂದು ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಗುರುಪ್ರಸಾದ್ ರೈಯವರ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಸುಮಾರು 5 ಮಂದಿ ಇದ್ದ ದರೋಡೆಕೋರರ ತಂಡ ದರೋಡೆ ಕೃತ್ಯ ಎಸಗಿತ್ತು. ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ, ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ ದರೋಡೆ ಮಾಡಲಾಗಿತ್ತು.ಮನೆಯ ಕಪಾಟನ್ನು ಒಡೆಯಲು ಮಾಡಿದ ಪ್ರಯತ್ನ ವಿಫಲವಾದಾಗ ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿ ರೈ ಅವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು.ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪಶ್ಚಿಮ ವಲಯ ಐಜಿಪಿ ಡಾ|ಚಂದ್ರಗುಪ್ತ, ದ.ಕ.ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್‌ಪಿ ಧರ್ಮಪ್ಪ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ಗಾನ ಪಿ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಬೆರಳಚ್ಚು ತಜ್ಞರು, ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.ಬಳಿಕ ಪ್ರಕರಣದ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು.ವೃತ್ತ ನಿರೀಕ್ಷಕ ರವಿ ಬಿ.ಯಸ್ ಮತ್ತು ಎಸ್.ಐ. ಉದಯರವಿ ನೇತೃತ್ವದಲ್ಲಿ ಒಟ್ಟು 4 ತಂಡ ರಚನೆ ಮಾಡಲಾಗಿದ್ದು ಪೊಲೀಸರ ತಂಡ ಆರೋಪಿಗಳ ಪತ್ತೆಗಾಗಿ ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ.


ಯುವಕನ ಫೊಟೋ ವೈರಲ್
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವೆಬ್‌ಸೈಟೊಂದರಲ್ಲಿ ಪ್ರಕಟವಾದ ಪುತ್ತೂರು:ಮನೆಯವರನ್ನು ಕಟ್ಟಿ ಹಾಕಿ ದರೋಡೆ-ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಭೇಟಿ’ ವರದಿಯ ಲಿಂಕ್ ಜೊತೆ ಯುವಕನೋರ್ವನ ಫೊಟೋ ಹಾಕಿವಸಂತ ಸಿಪಿಎಂ ಮೆಂಬರ್’ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here