ತಿಂಗಳಾಡಿ ರೋಟರ್ಯಕ್ಟ್ ಕ್ಲಬ್‌ನ ಪದಪ್ರಧಾನ ಸಮಾರಂಭ

0

ಪುತ್ತೂರು: ತಿಂಗಳಾಡಿ ರೋಟರ್ಯಕ್ಟ್ ಕ್ಲಬ್ ಇದರ 23-24ರ ಸಾಲಿನ ಪದಪ್ರಧಾನ ಸಮಾರಂಭ ತಿಂಗಳಾಡಿ ಕೆದಂಬಾಡಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೆ.17ರಂದು ನಡೆಯಿತು. ಕಾರ್ಯಕ್ರಮದಲ್ಲಿ ತಿಂಗಳಾಡಿ ರೋಟರ್ಯಕ್ಟ್ ಕ್ಲಬ್‌ನ ಮಾತೃ ಸಂಸ್ಥೆಯಾದ ಪುತ್ತೂರು ರೋಟರಿ ಕ್ಲಬ್ ಈಸ್ಟ್ ನ ಅಧ್ಯಕ್ಷ ಪದಪ್ರಧಾನಾಧಿಕಾರಿ ರೋಟೆರಿಯನ್ ಪಿ.ಎಚ್.ಎಫ್ ರಾಧಾಕೃಷ್ಣ ರೈ ಬೂಡಿಯರ್ ಅಧ್ಯಕ್ಷರಿಗೆ ಕೊರಳಪಟ್ಟಿ ಹಾಕಿ ಪದಪ್ರಧಾನ ಸಮಾರಂಭವನ್ನು ನಡೆಸಿಕೊಟ್ಟರು.ಅಧ್ಯಕ್ಷರು ,ಅತಿಥಿಗಳು ದೀಪ ಬೆಳಗಿಸುವ ಮೂಲಕ ನೂತನ ತಂಡಕ್ಕೆ ಶುಭ ಹಾರೈಸಿದರು.

ಪರಿಚಯ:
ಹರ್ಷಿತ್ ರೈ ಕೆ ಮಹಾಬಲ ರೈ ಕುಕ್ಕುಂಜೋಡು ಮತ್ತು ಲಕ್ಷ್ಮೀ ಎಂ ರೈ ಇವರ ಪುತ್ರ. ಪ್ರಸ್ತುತ ತಿಂಗಳಾಡಿ ಶ್ರೀ ಆಲಡ್ಕ ಎಂಟರ್ಪ್ರೈಸಸ್ ಇದರ ಮಾಲೀಕ.ಕಾರ್ಯದರ್ಶಿ ಹರೀಶ್ ರೈ ಮಿತ್ತೋಡಿ ಇವರು ದೇಲಂಪಾಡಿ ನಾರಾಯಣ ರೈ ಮಿತ್ತೋಡಿ ಮತ್ತು ಲೀಲಾವತಿ ರೈಯವರ ಪುತ್ರ. ಪ್ರಸುತ್ತ ಶಾಂತಿಗೋಡು ಗೇರು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಭಾಪತಿ ಶಶಿಧರ್ ರೈ ಪುತ್ತೂರು ಮಿಥಾಲಿ ಲೈಫ್ ಕೇರ್ ಇದರ ಮಾಲಕ.


ಕ್ಲಬಿನ ಸ್ಥಾಪಕಾಧ್ಯಕ್ಷ ಅಕ್ಷಯ ಕಾಲೇಜು ಸಂಪ್ಯ ರೋಟರ್ಯಕ್ಟ್ ಕ್ಲಬ್‌ನ ಸಭಾಪತಿ ರೊ ಎಂ.ಪಿ.ಎಚ್.ಎಫ್ ರತ್ನಕರ್ ರೈ ಜಿ ,ಅತಿಥಿರೋಟರ್ಯಕ್ಟ್ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ವಲಯ ಪ್ರತಿನಿಧಿ ನವೀನ್ ಚಂದ್ರ, ಕ್ಲಬಿನ ಸಭಾಪತಿರೊ ಶಶಿಧರ್ ರೈ ,ಕ್ಲಬ್ ಅಧ್ಯಕ್ಷ ರೋಟರ್ಯಕ್ಟ್ ರ್ ಹಷೀತ್ ರೈ. ಕೆ,ಕಾರ್ಯದರ್ಶಿ,ರೋಟರ್ಯಕ್ಟ್ ಜಿಲ್ಲಾ ಸಮಿತಿ ಸದಸ್ಯ ಹರೀಶ್ ರೈ ಮಿತ್ತೋಡಿ ,ಕ್ಲಬ್ ಸಲಹೆಗಾರರಾದ ಅನೀಶ್ ಶೆಟ್ಟಿ ಕಲ್ಲಮೆಟ್ಟು ,ನಿರ್ಗಮಿತ ಸಭಾಪತಿ ರೋಟೆರಿಯನ್ ನಿಶಾಂತ್ ರೈ ಸೊರಕೆ. ನಿಕಟ ಪೂರ್ವಾಧ್ಯಕ್ಷ ರೋ ಪ್ರದ್ವಿನ್ ರೈ ಕೆ ,ನಿರ್ಗಮಿತ ಕಾರ್ಯದರ್ಶಿ ರೊ ಧನುಷ್ ರೈ ಬಾಕುಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾತೃ ಸಂಸ್ಥೆಯ ರೋಟೆರಿಯನ್ಗಳಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಕಾರ್ಯದರ್ಶಿ ರವಿಕುಮಾರ್ ರೈ ಎಂ , ಅಭಿನಂಧನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಅಧ್ಯಕ್ಷ ಸತೀಶ್ ರೈ ಎಂ,ತುಳುನಾಡ್ ಚಿಕನ್ ಸೆಂಟರ್ ನ ಮಾಲಕ ಸುಭಾಷ್ ರೈ ಮಿತ್ತೋಡಿ , ಗಣೇಶ್ ರೈ ಮಿತ್ತೋಡಿ, ,ಶರತ್ ಗೌಡ ಲೋಹಿತ್ ಗೌಡ, ಶ್ರೀ ಕೃಷ್ಣಮಿತ್ರವೃಂದ ದೇವಗಿರಿ ತಿಂಗಳಾಡಿ ಇದರ ಪದಾಧಿಕಾರಿಗಳಾದ ಜಯರಾಮ ರೈ ಬಾಲಯ ,ಲೋಕೇಶ್ ರೈ ಮಿತ್ತೋಡಿ, ಕೃಷ್ಣಕುಮಾರ್ ರೈ ಗುತ್ತು ,ಆನಂದ ರೈ ಮಠ, ಸೂರ್ಯ ಸ್ಟುಡಿಯೊ ಮಾಲಕರಾದ ಸೂರ್ಯಪ್ರಸನ್ನ ರೈ ಎಂಡೆಸಾಗು, ಪ್ರಜ್ವಲ್ ಶೆಟ್ಟಿ ,ಕೆದಂಬಾಡಿ .ಗ್ರಾ. ಪಂ . ಸದಸ್ಯರಾದ ವಿಠಲ ರೈ ಮಿತ್ತೋಡಿ ಮತ್ತು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಅರುಣುಕುಮಾರ್ ಆಳ್ವ. ಬಿ ,ಸದಸ್ಯರಾದ ವಿಶ್ವನಾಥ ರೈ, ಮಹಾಬಲ ರೈ ,ಕೆದಂಬಾಡಿ ಯುವ ರಂಗದ ಅಧ್ಯಕ್ಷ ನಿತೇಶ್ ರೈ ಕೋರಂಗ, ಸದಸ್ಯರಾದ ಶೇಖರ್ ಪೂಜಾರಿ,ಕ್ಲಬ್ ಕೋಶಾಧಿಕಾರಿ ಧನುಷ್ ರೈ ಬಿ ,ದಂಡಾಧಿಕಾರಿ ಅರುಣು ರೈ ಬಿ ಜೊತೆ ಕಾರ್ಯದರ್ಶಿ ರಜತ್ ರೈ ಸಮುದಾಯ ಸೇವಾ ವಿಭಾಗದ ನಿರ್ದೇಶಕ ಪ್ರೀತಮ್ ಶೆಟ್ಟಿ ಯುವಜನ ಸೇವಾ ವಿಭಾಗದ ನಿರ್ದೇಶಕರಾದ ಅಮೋಘ ರಾವ್,ಅಂತರಾಷ್ಟ್ರೀಯ ಸೇವಾ ವಿಭಾಗ ನಿರ್ದೇಶಕರಾದ ಅಕ್ಷತ್ ರೈ ಸಿ ,ಕ್ಲಬ್ ಸೇವಾ ವಿಭಾಗದ ನಿರ್ದೇಶರಾದ ಕೃತಿಕ್ ರೈ ಎಂ, ಕ್ರೀಡಾ ಕಾರ್ಯದರ್ಶಿ ಸ್ನೇಹಿತ್ ರೈ ಎಂ, ಗ್ರಾಮಸ್ಥರು ಮತ್ತು ಅಧ್ಯಕ್ಷರ ಹೆತ್ತವರು , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ‌.


ಸನ್ಮಾನ: ಕ್ಲಬ್ ವತಿಯಿಂದ ಮಾಜಿ ಅಧ್ಯಕ್ಷ, ಕ್ಲಬಿನ ಸದಸ್ಯ ಕರ್ನಾಟಕ ಸರ್ಕಾರದ ಕಳೆಂಜ ಶಾಖೆಯ ಅರಣ್ಯ ಬೀಟ್ ಫಾರೆಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸನತ್ ಕುಮಾರ್ ರೈ ಕೆದಂಬಾಡಿಮಠ,ಯುವಜನ ಸೇವಾ ವಿಭಾಗದಲ್ಲಿ ಸಾಂದಿಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರಿನ 22-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೆದಂಬಾಡಿ ಗ್ರಾಮದ ವಿದ್ಯಾರ್ಥಿನಿಗಳಾದ ಮನ್ವಿ ರೈ ಮತ್ತು ಆಧ್ಯಾ ರೈ .ಚಾವಡಿಯವರನ್ನು, ಕ್ಲಬಿನ ನಿರ್ಗಮಿತ ಸಭಾಪತಿ,ಅಧ್ಯಕ್ಷ,ಕಾರ್ಯದರ್ಶಿಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಸಮುದಾಯ ಸೇವಾ ವಿಭಾಗ ಬೋಳೋಡಿ ಅಂಗನವಾಡಿ ಕೇಂದ್ರಕ್ಕೆ ಆಹಾರ ಧಾನ್ಯ ಶೇಖರಣಾ ಬಾಕ್ಸ್ ನ್ನು ನೀಡಲಾಯಿತು.ರೊ. ರಜತ್ ಪ್ರಾರ್ಥಿಸಿ, ಕ್ಲಬ್ ಅಧ್ಯಕ್ಷ ರೋಟರ್ಯಕ್ಟ್ರ್ ಪ್ರದ್ವಿನ್ ರೈ ಸ್ವಾಗತಿಸಿ,ಕ್ಲಬ್ ಕಾರ್ಯದರ್ಶಿ Rtr ಹರೀಶ್ ರೈ ಮಿತ್ತೋಡಿ ವಂದಿಸಿ ,ಶರತ್ ಗೌಡ ಜಿ ನಿರೂಪಿಸಿದರು.

LEAVE A REPLY

Please enter your comment!
Please enter your name here