ಪುತ್ತೂರು: ಪ್ರತಿಷ್ಠಿತ ಕೆಮ್ಮಿಂಜೆ ತಂತ್ರಿ ಮನೆ ತನದ ದಿ.ಕೇಶವ ತಂತ್ರಿಗಳ ಮೊಮ್ಮಗ, ದಿ.ಸುಬ್ರಹ್ಮಣ್ಯ ತಂತ್ರಿಗಳ ಪುತ್ರ ಬೆಳ್ತಂಗಡಿ ಲಾಯಿಲ ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಪೇಸರ್ ಆಗಿರುವ ಡಾ.ಸುಜಯ್ ಕೃಷ್ಣ ತಂತ್ರಿಗಳ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಸೆ.27ರಂದು ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಜನರಲ್ ಪಿಸಿಷಿಯನ್ ಹಾಗೂ ಆಯುರ್ವೇದ ತಜ್ಞ ವೈದ್ಯರಾಗಿರುವ ಡಾ.ಸುಜಯ್ ತಂತ್ರಿಯವರ ಕ್ಲಿನಿಕ್ ನಲ್ಲಿ ಕಂಪ್ಯೂಟರೀಕೃತ ರಕ್ತ ಪರೀಕ್ಷೆ, ಇಸಿಜಿ, ನೆಬ್ಯುಲೈಸರ್ ಗೆ ಪೂರಕವಾದ ಸುಸಜ್ಜಿತ ಲ್ಯಾಬೋರೇಟರಿ ಸೌಲಭ್ಯವಿದೆ. ಜೊತೆಗೆ ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಕೌನ್ಸೆಲಿಂಗ್ ವಿಭಾಗಗಳಲ್ಲಿ ತಜ್ಞ ವೈದ್ಯರು ಕ್ಲಿನಿಕ್ ನಲ್ಲಿ ಸೇವೆ ಲಭ್ಯಲಿರಲಿದ್ದಾರೆ. ಪಿಸಿಯೋ ಥೆರಫಿ, ಕಪ್ಪಿಂಗ್ ಥೆರಫಿ, ಮರ್ಮ ಚಿಕಿತ್ಸೆ, ಕೈರೋ ಪ್ರಾಕ್ಟಿಕ್ ಥೆರಫಿ, ಡಯೆಟ್ ಥೆರಫಿ ಹಾಗೂ ರಕ್ತ ಪರೀಕ್ಷೆಗಳು ಮೊದಲಾದ ಸೇವೆಗಳು ಕ್ಲಿನಿಕ್ ನಲ್ಲಿ ಲಭ್ಯವಿದ್ದು ವಿವಿಧ ವಿಭಾಗಳ ನುರಿತ ತಜ್ಞ ವೈದ್ಯರುಗಳು ಕ್ಲಿನಿಕ್ ನಲ್ಲಿ ಸೇವೆ ಲಭ್ಯವಿದ್ದಾರೆ ಎಂದು ಡಾ.ಸುಜಯ್ ಕೃಷ್ಣ ತಂತ್ರಿ ತಿಳಿಸಿದ್ದಾರೆ.