ವಿಕಲಚೇತನರ, ವಿಧವಾ ವೇತನ ಅರ್ಜಿಗೆ ಉಚಿತ ಸೇವೆ

0

ಶಿವಂ ಜನಸೇವಾ ಕೇಂದ್ರ ಉದ್ಘಾಟನೆಯಲ್ಲಿ ಮಾಲಕ ಶಾಂತಾರಾಮ ಶೆಟ್ಟಿ ಘೋಷಣೆ
ಸಾರ್ವಜನಿಕರಿಗೆ ಪ್ರಯೋಜನವಾಗಲಿ – ಜಯಕರ ಶೆಟ್ಟಿ

ಪುತ್ತೂರು: ಪುತ್ತೂರು ಚೇತನಾ ಆಸ್ಪತ್ರೆಯ ಬಳಿಯ ರುಕ್ಮ ಕಟ್ಟಡದಲ್ಲಿ ನೂತನವಾಗಿ ಶುಭಾರಂಭಗೊಂಡ ಶಿವಂ ಜನಸೇವಾ ಕೇಂದ್ರದಲ್ಲಿ ವಿಕಲಚೇತನರಿಗೆ ಮತ್ತು ವಿಧವೆಯರಿಗೆ ಮಾಸಿಕ ಸಿಗುವ ಸರಕಾರಿ ಸೌಲಭ್ಯಗಳಿಗೆ ಬೇಕಾಗುವ ಅರ್ಜಿ ಸೇವೆಯನ್ನು ಉಚಿತವಾಗಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಶಾಂತಾರಾಮ ಶೆಟ್ಟಿ ಘೊಷಣೆ ಮಾಡಿದ್ದಾರೆ.


ಸರಕಾರಿ ಸೇವೆಗಳನ್ನು ಸುಲಭವಾಗಿ ಜನರಿಗೆ ನೀಡುವ ನಿಟ್ಟಿನಲ್ಲಿ ಜನಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಸೆ. 27ರಂದು ಪುತ್ತೂರು ಚೇತನಾ ಆಸ್ಪತ್ರೆಯ ಬಳಿ ಉದ್ಘಾಟನೆಗೊಂಡ ’ಶಿವಂ’ ಜನಸೇವಾ ಕೇಂದ್ರದಲ್ಲಿ ಅವರು ಮಾತನಾಡಿದರು. ಈ ಸೇವಾ ಕೇಂದ್ರ ಈಗ ಪ್ರಾರಂಭ ಆಗಿದೆಯೆಷ್ಟೆ. ಸಾಧ್ಯವಾದಷ್ಟು ಸೇವೆ ನೀಡುವ ಕಾರ್ಯ ಮಾಡುತ್ತೇವೆ. ಅದರಲ್ಲೂ ಅಂಕವಿಕಲರಿಗೆ ಪಾಸ್ ಸೌಲಭ್ಯ ಮತ್ತು ವಿಧವೆಯರಿಗೆ ವಿಧವೇತನ ಸೌಲಭ್ಯದ ಅರ್ಜಿಗಳನ್ನು ಉಚಿತವಾಗಿ ನಾವು ಇಲ್ಲಿ ಮಾಡಿಕೊಡುತ್ತೇವೆ ಎಂದರು ಹೇಳಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಅಧ್ಯಕ್ಷ ಮಾಡಾವು ವಿಶ್ವನಾಥ ರೈ ಅವರು ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೆ.ಎಸ್.ಆರ್.ಟಿ.ಸಿ ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರು ಮಾತನಾಡಿ ಸಾರ್ವಜನಿಕರಿಗೆ ಇದರಿಂದ ಪ್ರಯೋಜನವಾಗಲಿ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಅವರು ಮಾತನಾಡಿ ಈಗಿನ ಯುಗದಲ್ಲಿ ಇಂತಹ ಸಂಸ್ಥೆ ಅನಿವಾರ್ಯ. ಈ ಸಂಸ್ಥೆಯಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯವಾಗಲಿ ಎಂದರು. ಎಮ್.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಶರಣ್ ಪಿಂಟೋ ಮತ್ತು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಅಧ್ಯಕ್ಷ ರಾಮದಾಸ್ ವಿಟ್ಲ ಶುಭ ಹಾರೈಸಿದರು. ಸಂಸ್ಥೆಯ ಆರಂಭಕ್ಕಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪೂರ್ಣ ಸಹಕಾರ ನೀಡಿದ ರಾಜ್ ವಿಟ್ಲ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿಟಿವಿ ನ್ಯೂಸ್ ಚಾನೆಲ್ ನಿರೂಪಕಿ ಅಶ್ವಿನಿ ಪೆರುವಾಯಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲೀಕ ಶಾಂತಾರಾಮ ಶೆಟ್ಟಿಯವರ ಪತ್ನಿ ಪ್ರವೀಣಾ ಶಾಂತಾರಾಮ ಶೆಟ್ಟಿ, ಕೆ.ಎಸ್.ಆರ್.ಟಿ.ಸಿ ಮಜ್ದೂರ ಸಂಘದ ಗೌರಾಧ್ಯಕ್ಷ ನ್ಯಾಯವಾದಿ ಶ್ರೀಗಿರೀಶ್ ಮಲಿ ಸಹಿತ ಅನೇಕ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here