ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಗ್ರಾಮ ವಿಕಾಸ ಯೋಜನೆಯ ದತ್ತು ಗ್ರಾಮವಾದ ಮಾಣಿ ಗ್ರಾಮ ಪಂಚಾಯತ್ ನಲ್ಲಿ ವಲಯ ಮಟ್ಟದ ಪೌಷ್ಟಿಕ ಸಪ್ತಾಹ ಹಾಗೂ ಔಷಧಿ ಗಿಡಮೂಲಿಕೆಗಳ ಕುರಿತು ಮಾಹಿತಿ ಕಾರ್ಯಾಗಾರ ಸೆ.21ರಂದು ನಡೆಯಿತು.
ವಿವೇಕಾನಂದ ಸೆಂಟ್ರಲ್ ಸ್ಕೂಲ್ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆಯುರ್ವೇದ ವೈದ್ಯ ಮನೋರಮಾ ಭಟ್ ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಅವುಗಳ ಸೂಕ್ತ ಉಪಯೋಗಗಳ ಕುರಿತು ಮಾಹಿತಿಯೊಂದಿಗೆ ಸಭಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು.
ವೈದ್ಯರನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿ ಸದಸ್ಯ ಶಂಕರಿ ಶರ್ಮ ಪರಿಚಯಿಸಿದರು. ಸದಸ್ಯ ವಿಜಯಾನಂದ ಕೈಂತಜೆ, ಶಾಲೆಯ PET ಶಿಕ್ಷಕ ನವೀನ್ ಕುಮಾರ್, ಮಾಣಿ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ, ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ಪ್ರೀತಿ ದಿನ್ನಾ ಪಿರೇರಾ, ಮೆಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ PDO ಗಿರಿಜಾ, ಪೋಷಣ್ ಅಭಿಯಾನದ ಸಂಯೋಜಕಿ ವಿನಿತಾ, ಹಿರಿಯ ಅರೋಗ್ಯ ಸಹಾಯಕಿ ಲಕ್ಷ್ಮಿಯವರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ ಸ್ವಾಗತಿಸಿ, ಶಶಿಕಲಾ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಬಳಿಕ, ಆಗಮಿಸಿದ ಸರ್ವರಿಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವತಿಯಿಂದ ಉಪಯುಕ್ತ ಔಷಧೀಯ ಸಸ್ಯಗಳನ್ನು ಉಚಿತವಾಗಿ ಹಂಚಲಾಯಿತು.