ಟೀಮ್ ಕಲ್ಲೇಗ ಟೈಗರ್ಸ್ 6 ನೇ ವರ್ಷದ ‘ಪಿಲಿಏಸ’ -ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರ ಬಿಡುಗಡೆ 

0

ಪುತ್ತೂರು: ನವರಾತ್ರಿಯಂದು  ಜನರನ್ನು ರಂಜಿಸಲು ಟೀಮ್ ಕಲ್ಲೇಗ ಟೈಗರ್ಸ್ ಸಿದ್ದವಾಗಿದ್ದು  6ನೇ ವರ್ಷದ ‘ಪಿಲಿಏಸ’ ದ ಆಮಂತ್ರಣ ಪತ್ರಿಕೆ ಬಿಡುಗಡೆ ಸೆ.27 ರಂದು ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದಲ್ಲಿ ನಡೆಯಿತು.

ಕಳೆದ 5 ವರ್ಷಗಳಿಂದ ಕಲ್ಲೇಗ ಟೈಗರ್ಸ್ ತಂಡವೂ ನವರಾತ್ರಿಯ ದಿನ ಹುಲಿವೇಷ ಹಾಕಿ, ಪುತ್ತೂರಿನ ರಸ್ತೆಗಳಲ್ಲಿ ಸಂಚರಿಸಿ ತಾಸೆಯ ಪೆಟ್ಟಿಗೆ ಕುಣಿದು ಎಲ್ಲರನ್ನ ರಂಜಿಸುತ್ತಾ ಬಂದಿದೆ. ಅಂತೆಯೇ ಈ ವರ್ಷ ಅ.19ರಂದು ರಾತ್ರಿ ಊದು ಪೂಜೆ ನಡೆದು, ಬಳಿಕ ಅ. 20ರಂದು ಕಲ್ಲೆಗ ಶ್ರೀ ಕಲ್ಕುಡ ದೈವಸ್ಧಾನದಲ್ಲಿ ಹುಲಿ ಇಳಿಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಪುತ್ತೂರಿನ ಪೇಟೆಯಲ್ಲಿ ಸಂಚರಿಸಲಿದೆ. ಕಳೆದ ಬಾರಿ ನಡೆದ ‘ಪಿಲಿಗೊಬ್ಬುವಿನಲ್ಲಿ  ಪುತ್ತೂರಿನ ಇತಿಹಾಸದಲ್ಲೆ ಪ್ರಪ್ರಥಮ ಭಾರಿಗೆ, ಸುಮಾರು 60 ಹುಲಿಗಳು ಬಣ್ಣ ಹಚ್ಚಿ ತಾಸೆಯ ಪೆಟ್ಟಿಗೆ ಕುಣಿದು ಇತಿಹಾಸ ನಿರ್ಮಿಸಿತ್ತು, ಇದರ ಜೊತೆಗೆ ಕಳೆದ ವರ್ಷ ಬಿಗ್‌ಬಾಸ್ ವೇದಿಕೆಯಲ್ಲಿ ಹುಲಿ ವೇಷ ಹಾಕಿ ಕುಣಿದ ಹೆಗ್ಗಳಿಕೆಯೂ ಈ ತಂಡಕ್ಕಿದೆ.

LEAVE A REPLY

Please enter your comment!
Please enter your name here