ವಿಟ್ಲ: ಆಟೋ ರಿಕ್ಷಾದಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬಂಟ್ವಾಳ ತಾಲೂಕು ವಿಟ್ಲ ಕಸಬ ನಿವಾಸಿ ಮಹಮ್ಮದ್ ಸುಹೈಲ್ ಪ್ರಕರಣದ ದೂರುದಾರರಾಗಿದ್ದು, ಸೆ.27ರಂದು ರಾತ್ರಿ ನಾನು ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಹಾರೀಸ್ ಎಂಬಾತನ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿ ಮಾತಿನ ಚಕಮುಖಿ ನಡೆದಿತ್ತು.
ಇದೇ ಪ್ರಕರಣದ ಮುಂದುವರಿದ ಭಾಗವೆಂಬಂತೆ ಸೆ.28ರಂದಿ ಬೆಳಿಗ್ಗೆ ನಾನು ನನ್ನ ಅಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ತಲುಪಿದಾಗ ಆರೋಪಿ ಹಾರೀಸ್ ಎಂಬಾತನು ಆತನ ಅಟೋರಿಕ್ಷಾದಲ್ಲಿ ಅಶ್ರಫ್ ಉರಿಮಜಲು, ರಿಯಾಝ್ ಉರಿಮಜಲು ಹಾಗೂ ಅಚ್ಚುಕು ಕೊಲ್ಪೆ ರವರೊಂದಿಗೆ ಸೇರಿ ನನ್ನ ಅಟೊ ರಿಕ್ಷಾಕ್ಕೆ ಅವರ ಆಟೋ ರಿಕ್ಷಾವನ್ನು ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಾರೀಸ್ ನನಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಸುಹೈಲ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.