ಕೊಣಾಲು ಶಾಲೆಗೆ ಹಳೆವಿದ್ಯಾರ್ಥಿ ಸಂಘದಿಂದ ನೆರವು

0

ನೆಲ್ಯಾಡಿ: ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯ ಬಾವಿಗೆ ಪಂಪ್ ಅಳವಡಿಸಲು 10.500 ರೂಪಾಯಿಯನ್ನು ಶಾಲೆಯ ಹಳೆವಿದ್ಯಾರ್ಥಿ ಸಂಘದವರು ದೇಣಿಗೆಯಾಗಿ ನೀಡಿ ಸಹಕರಿಸಿದರು.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಸ್ನೇಹ ಜೀವಿ ಲಾರಿ ಮಾಲಕ ಹಾಗೂ ಚಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಝುಭೈರ್ ಕೊಳಂಬೆ, ಪದಾಧಿಕಾರಿಗಳಾದ ಮುಸ್ತಫಾ ಕುದ್ದೂಸ್, ಆರಿಫ್ ಎಚ್.ರವರು ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾ ಪಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಇ ಮುಹಮ್ಮದ್ ರಫೀಕ್, ಶಿಕ್ಷಕಿ ಭವಾನಿಯವರಿಗೆ ಹಸ್ತಾಂತರಿಸಿದರು. ಜಾಪರ್ ಡ್ರೈವರ್, ರಫೀಕ್ ಕುಮೇರು, ಅರ್ಷದ್ ಕೆ.ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here