ಖೋ ಖೋ: ಹಳೆನೇರೆಂಕಿ ಶಾಲಾ ಬಾಲಕಿಯರ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಹಳೆನೇರೆಂಕಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಇನ್‌ಫೆಂಟ್ ಮೇರಿ ಆಂಗ್ಲಮಾಧ್ಯಮ ಶಾಲೆ ಕಾಟಿಪಳ್ಳ ಸುರತ್ಕಲ್ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕ/ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ್ದ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ತಂಡದ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ತಂಡದ 8ನೇ ತರಗತಿಯ ಕೃತಿ, ಯೋಗ್ಯ, ಸಂಜನಾ, 7ನೇ ತರಗತಿಯ ಮೇಘಶ್ರೀ, ಜೀವಿಕಾ, ಜೋತಿಕಾ, ನಂದಿತಾ, ತನ್ವಿ, ಕೃತಿಕಾ, ಅಶ್ವಿತಾ, 6ನೇ ತರಗತಿಯ ರಿಶಿಕಾ, ಹೇಮಾನ್ಯ, ಚರಣ್ಯ, ಕೀರ್ತನಾ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದ 8ನೇ ತರಗತಿಯ ಲಿಖಿತ್, 7ನೇ ತರಗತಿಯ ಜಯೇಶ, ನೂತನ್ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಮಣ್ಣ ಗೌಡ ಹಾಗೂ ಖೋ ಖೋ ತರಬೇತುದಾರರಾದ ಮಾಧವ ಗೌಡರವರು ತರಬೇತಿ ನೀಡಿದ್ದರು. ಶಾಲೆಯ ಮುಖ್ಯಗುರು ವೈ.ಸಾಂತಪ್ಪ ಗೌಡ ಮತ್ತು ಶಿಕ್ಷಕವೃಂದದವರು ಪ್ರೋತ್ಸಾಹಿಸಿದರು. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಪೋಷಕರು ಆಟಗಾರರಿಗೆ ಹಣ್ಣು ಹಂಪಲು ಹಾಗೂ ಶಾಲೆಯ ಹಳೆವಿದ್ಯಾರ್ಥಿಗಳು ಬಾಲಕ ಬಾಲಕಿಯರ ತಂಡ ಮಂಗಳೂರಿಗೆ ತೆರಳುವುದಕ್ಕೆ ವಾಹನದ ವ್ಯವಸ್ಥೆ ಮಾಡಿ ಸಹಕರಿಸಿದರು. ಅ.9 ಮತ್ತು 10ರಂದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾಟ ನಡೆಯಲಿದೆ.

LEAVE A REPLY

Please enter your comment!
Please enter your name here