ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭ

0

ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ-ಶ್ರೀ ಪಿ.ಜಿ. ಜಗನ್ನಿವಾಸ ರಾವ್.

ಪುತ್ತೂರು: “ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರ:” ಅಂದರೆ,ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ ಅಂದರೆ ದೇವರ ಸ್ವರೂಪ ಪಡೆಯುತ್ತದೆ. ಇಲ್ಲಿ ಅರ್ಚಕನೆಂದರೆ ಯಾರೆಲ್ಲಾ ತ್ರಿಕರಣ ಪೂರ್ವಕವಾಗಿ ಶಿಲೆಯಲ್ಲಿ ದೇವರನ್ನು ಏಕನಿಷ್ಠೆಯಿಂದ ಕಾಣುತ್ತಾರೋ ಆ ಭಕ್ತರೆಲ್ಲರೂ ಒಂದು ರೀತಿಯಿಂದ ಅರ್ಚಕರೇ ಆಗುತ್ತಾರೆ. ಭಗವಂತನನ್ನು ತ್ರಿಕರಣಪೂರ್ವಕವಾಗಿ ಭಜಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪುತ್ತೂರು ನಗರಸಭಾ ಸದಸ್ಯ, ಸಮಾಜ ಸೇವಕ, ಧಾರ್ಮಿಕ ಚಿಂತಕ ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಹಾಲಿಂಗನೆಂದರೆ ಬ್ರಹ್ಮ, ವಿಷ್ಣು , ಮಹೇಶ್ವರರ ಸಂಗಮ. ವೇದ, ಆಗಮ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಪ್ರದಕ್ಷಿಣಾ ಪದ್ದತಿ, ಶಿವನ ಸನ್ನಿಧಿಯಲ್ಲಿರುವ ಇತರ ದೇವ ಸಾನ್ನಿಧ್ಯಗಳ ಮಹತ್ವವನ್ನು ವಿಶದೀಕರಿಸಿ, ಟ್ರಸ್ಟ್ ನ ಚಟುವಟಿಕೆಗಳು ಹತ್ತೂರಿಗೆ ಪಸರಿಸಲಿ ಎಂದು ಶುಭ ಹಾರೈಸಿದರು.

ಸಂಚಾಲಕ ಗೋಪಾಲಕೃಷ್ಣ ಮಾತನಾಡಿ ಟ್ರಸ್ಟ್ ನ ರೂಪುರೇಶೆಗಳನ್ನು ವಿವರಿಸಿ, ಭಜನೆಯ ಜೊತೆಗೆ ಪರಸ್ಪರ ಹೊಂದಾಣಿಕೆ, ಸಹಕಾರದೊಂದಿಗೆ ಟ್ರಸ್ಟ್ ನ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದರು. ಗೌರವಾಧ್ಯಕ್ಷ ಪಕೀರ ಗೌಡ, ಭಾರತಿ ನೂತನ ಸದಸ್ಯ ನೇಮಿರಾಜ್ ತಮ್ಮ ಅನಿಸಿಕೆ ಹಂಚಿಕೊಡರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ನಿಕಟ ಪೂರ್ವಾಧ್ಯಕ್ಷ ಜಗನ್ನಾಥ ಪೂಜಾರಿ ಭಜನೆಯೊಂದಿಗೆ ಸೇವಾ ಮನೋಭಾವ ಮೈಗೂಡಿಸಿಕೊಂಡು ಟ್ರಸ್ಟ್ ನ ಕೀರ್ತಿಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಕೈಜೋಡಿಸುವ ಸಲಹೆ ನೀಡಿದರು. ಟ್ರಸ್ಟ್ ನ ಕೋಶಾಧಿಕಾರಿ ಧನುಷಾ ಪ್ರಾರ್ಥಿಸಿದರು. ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾವತಿ ವಂದಿಸಿದರು. ನೂತನಾಧ್ಯಕ್ಷೆ ಶಾರದಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here