ಈಜು ಸ್ಪರ್ಧೆಯಲ್ಲಿ ಅಂಬಿಕಾದ ಅನಿಕೇತ್ ಮತ್ತು ಧನ್ವಿತ್ ರಾಜ್ಯಮಟ್ಟಕ್ಕೆ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಧನ್ವಿತ್ ಹಾಗೂ ಅನಿಕೇತ್ ಎನ್. ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಘಟಕ ಹಾಗೂ ಮಂಗಳೂರಿನ ಬಲ್ಮಠದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಪುತ್ತೂರು ಮರೀಲಿನ ಕೇಶವ ಕುಮಾರ್ ಕೆ ಎಂ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಧನ್ವಿತ್ ನೂರು ಮೀಟರ್ ಫ್ರೀ ಸ್ಟೈಲ್, ಐವತ್ತು ಮೀಟರ್ ಫ್ರೀ ಸ್ಟೈಲ್ ಹಾಗೂ ಐವತ್ತು ಮೀಟರ್ ಬ್ಯಾಕ್ ಸ್ರ್ಟೋಕ್ ಸ್ಪರ್ಧೆಗಳಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದರೆ ದರ್ಬೆಯ ನಳಿನಾಕ್ಷ ಎನ್-ಗಾಯತ್ರಿ ಪಿ ದಂಪತಿಯ ಪುತ್ರ ಪ್ರಥಮ ಪಿ.ಯು.ಸಿ.ಯ ಅನಿಕೇತ್ ಎನ್ ಇನ್ನೂರು ಮೀಟರ್ ಮಿಡ್ಲೆ, ನೂರು ಮೀಟರ್ ಬ್ಯಾಕ್ ಸ್ರ್ಟೋಕ್ ಹಾಗೂ ಐವತ್ತು ಮೀಟರ್ ಬ್ಯಾಕ್ ಸ್ರ್ಟೋಕ್ ಸ್ಪರ್ಧೆಗಳಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿರುತ್ತಾರೆ. ಮಂಗಳೂರಿನ ಮಂಗಳ ಈಜು ಕ್ಲಬ್‌ನಲ್ಲಿ ಸೆಪ್ಟೆಂಬರ್ ೨೭ರಂದು ಈ ಸ್ಪರ್ಧೆಗಳು ಆಯೋಜನೆಗೊಂಡಿದ್ದವು.

LEAVE A REPLY

Please enter your comment!
Please enter your name here