ಪುತ್ತೂರು:ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಡಿಜಿಟಲ್ ಕ್ಯಾಮರಾ ಖರೀದಿ ಹಾಗೂ ಎಲ್ಲಾ ರೀತಿಯ ಬಿಡಿಭಾಗಗಳು, ಸರ್ವೀಸ್ಗಳಿಗಾಗಿ ಇನ್ನು ದೂರದ ಊರುಗಳಿಗೆ ಅಲೆದಾಡಬೇಕಾಗಿಲ್ಲ. ಇನ್ನು ಮುಂದೆ ಪುತ್ತೂರಿನಲ್ಲಿಯೇ ಎಲ್ಲಾ ಸೌಲಭ್ಯಗಳು ದೊರೆಯುವ, ಕ್ಯಾಮೆರಾ ಸೇಲ್ಸ್ ಮತ್ತು ಸರ್ವೀಸ್ನಲ್ಲಿ ಸುಧೀರ್ಘ 26 ವರ್ಷಗಳ ಇತಿಹಾಸವಿರುವ ಕ್ಯಾಮರಾ ಸೆಂಟರ್ ಸೆ.29ರಂದು ಕೆಎಸ್ಆರ್ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಮಂಗಳೂರು ಮಿಲಾಗ್ರಿಸ್ ಕ್ರಾಸ್ ರಸ್ತೆ, ಕೇರಳದ ಕ್ಯಾಲಿಕಟ್ಗಳಲ್ಲಿ ಈಗಾಗಲೇ ಶಾಖೆಗಳನ್ನು ಹೊಂದಿದೆ. ಕ್ಯಾಮರಾ ಕ್ಷೇತ್ರದಲ್ಲಿ ಸರ್ವೀಸ್ ಸಂಸ್ಥೆಯ ಮೂಲ ಉದ್ದೇಶವಾಗಿರುವ ಸಂಸ್ಥೆಯಲ್ಲಿ ಎಲ್ಲಾ ಕಂಪನಿಗಳ ಬ್ರಾಂಡೆಡ್ ಕ್ಯಾಮರಾಗಳ ಮಾರಾಟವನ್ನು ಹೊಂದಿದ್ದು ಕ್ಯಾಮರಾ ಖರೀದಿಸುವವರಿಗೆ ಉತ್ತಮ ಅವಕಾಶ ಒದಗಿಸಲಾಗಿದೆ. ಜೊತೆಗೆ ಎಲ್ಲಾ ಬ್ರಾಂಡೆಡ್ ಕಂಪನಿ ಕ್ಯಾಮರಾಗಳ ಬಿಡಿ ಭಾಗಗಳು, ಸರ್ವೀಸ್ಗಳು, ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದ ಎಲ್ಲಾ ಸಲಕರಣೆಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.
ಪುತ್ತೂರಿನ ವೃತ್ತಿಪರ ಫೋಟೋಗ್ರಾಫರ್ಸ್ಗಳ ಬಹು ಅಪೇಕ್ಷೆಯಂತೆ ಪುತ್ತೂರಿನಲ್ಲಿ ಶಾಖೆ ಪ್ರಾರಂಭಗೊಂಡಿದೆ. ಇನ್ನು ಹೊಸ ಕ್ಯಾಮರಾ ಖರೀದಿ, ಸರ್ವೀಸ್ ಅಥವಾ ಬಿಡಿ ಭಾಗಗಳಿಗಾಗಿ ದೂರದ ಮಂಗಳೂರು ಅಥವಾ ಇತರ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆಯಿಲ್ಲ. ಕ್ಯಾಮರಾಗಳ ದುರಸ್ಥಿ, ಬಿಡಿ ಭಾಗಗಳ ಖರೀದಿಗೆ ಮಂಗಳೂರಿಗೆ ತೆರಲುವ ಸಮಯ ಹಾಗೂ ಹಣ ಉಳಿತಾಯವಾಗಲಿದ್ದು ಸ್ಟುಡಿಯೋ ಮ್ಹಾಲಕರು, ವೃತ್ತಿಪರ ಛಾಯಾಗ್ರಾಹಕರು, ಯೂಟ್ಯೂಬರ್ಗಳಿಗೆ ಬಹಳಷ್ಟು ವರದಾನವಾಗಲಿದೆ. ಸಂಸ್ಥೆಯಲ್ಲಿ ನುರಿತ ತಂತ್ರಜ್ಞರಿಂದ ಸರ್ವೀಸ್ಗಳು ದೊರೆಯಲಿದೆ. ಮಡಿಕೇರಿಯಿಂದಲೂ ದುರಸ್ಥಿ ಹಾಗೂ ಖರೀದಿಗೆ ಮಂಗಳೂರನ್ನೇ ಅವಲಂಬಿಸಿದ್ದ ಎಲ್ಲಾ ಫೋಟೋಗ್ರಾಫರ್ಸ್ಗಳಿಗೆ ಅನುಕೂಲಕರವಾಗಲಿದೆ. ಪುತ್ತೂರು ಮಾತ್ರವಲ್ಲದೆ ಸುಳ್ಯ, ಮಡಿಕೇರಿ, ಉಪ್ಪಿನಂಗಡಿ, ಕಡಬ, ವಿಟ್ಲ ಸೇರಿದಂತೆ ಆಸುಪಾಸಿನ ಎಲ್ಲಾ ಊರುಗಳಲ್ಲಿರುವ ಹವ್ಯಾಸಿ ಹಾಗೂ ವೃತ್ತಿಪರ ಫೋಟೋಗ್ರಾಫರ್ಗಳಿಗೆ ಇನ್ನುಮುಂದೆ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ ಪುತ್ತೂರಿನಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮ್ಹಾಲಕ ಭರತ್ ತೊಕ್ಕೊಟ್ಟು ತಿಳಿಸಿದ್ದಾರೆ.