ಪುತ್ತೂರು: ಅ.15ರಿಂದ ಅ.24ರ ವರೆಗೆ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ನವರಾತ್ರಿ ಉತ್ಸವ, ಶಾರದೋತ್ಸವ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಸೆ.29ರಂದು ಸಂಜೆ ಮಂದಿರದಲ್ಲಿ ನಡೆಯಿತು. ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ ಪ್ರಾರ್ಥಿಸಿ ನವರಾತ್ರಿಯ, ಶಾರದೋತ್ಸವ, ಶೋಭಾಯಾತ್ರೆ ಯಾವುದೇ ಆತಂಕವಿಲ್ಲದೇ ವಿಜೃಂಭಣೆಯಿಂದ ನಡೆಯಲಿ ಎಂದು ಶುಭಹಾರೈಸಿ ಉತ್ಸವ ಸಮಿತಿಯವರಿಗೆ ಆಮಂತ್ರಣ ಪತ್ರ ಹಸ್ತಾಂತರಿಸಿದರು. ಮಂದಿರದ ಉಪಾಧ್ಯಕ್ಷ ರಮೇಶ್ ಬಾಬು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಶಾರದೋತ್ಸವ ಲಾಂಛನ ಲೋಕಾರ್ಪಣೆ: ಈ ವರ್ಷ ಗತವೈಭವದಿಂದ ನಡೆಯಲಿರುವ ಶಾರದೋತ್ಸವದಲ್ಲಿ ಉತ್ಸವದ ಲಾಂಛನ ಬಿಡುಗಡೆಗೊಳಿಸಲಾಯಿತು. ಡಾ. ಸುರೇಶ್ ಪುತ್ತೂರಾಯರವರು ಶಾರದೋತ್ಸವ ಲಾಂಛನ ಲೋಕಾರ್ಪಣೆಗೊಳಿಸಿ, ಶುಭಹಾರೈಸಿದರು. ಶಾರದೋತ್ಸವ ಕುರಿತಂತೆ ಅನ್ನದಾನದ ರಶೀದಿ ಪುಸ್ತಕವನ್ನು ದ.ಕ. ಜಿಲ್ಲಾ ಯೆಂಗ್ ಬಿಗ್ರೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್, ಶೋಭಾಯಾತ್ರೆ ಸಂಚಾಲಕ ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಕಾರ್ಯಾಧ್ಯಕ್ಷ ಮುರಳಿಕೃಷ್ಣ ಹಸಂತ್ತಡ್ಕ, ಉಪಾಧ್ಯಕ್ಷ ದಯಾನಂದ ಆದರ್ಶ, ನಯನಾ ರೈ ನೆಲ್ಲಿಕಟ್ಟೆ, ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿ ಎಂ. ಗೋಪಾಲಕೃಷ್ಣ ಈಶ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಕೋಶಾಧಿಕಾರಿ ತಾರನಾಥ್ ಎಚ್, ಸಮಿತಿ ಸದಸ್ಯರು, ಉಪಸ್ಥಿತರಿದ್ದರು. ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಸ್ವಾಗತಿಸಿದರು, ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.