






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟು ನಿವಾಸಿ ಮಾಯಿಲಪ್ಪ ಮತ್ತು ಸರೋಜ ದಂಪತಿಯ ಪುತ್ರ, ಎಂಡೋಸಲ್ಫಾನ್ ಪೀಡಿತ ಬಾಲಕ ಹೃತಿಕ್(13ವ.) ಸೆ.3೦ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹೃತಿಕ್ ಬಾಲ್ಯದಲ್ಲಿ ಆರೋಗ್ಯವಂತನಾಗಿದ್ದು 3ನೇ ತರಗತಿಯ ತನಕ ಶಾಲೆಗೆ ಹೋಗಿದ್ದ. ಆ ಬಳಿಕ ಆತನಿಗೆ ಸೊಂಟದ ಕೆಳಗೆ ಬಲವಿಲ್ಲದಂತಾಗಿ ಕಾಲಿನ ಸ್ವಾಧೀನ ಕಳೆದುಕೊಂಡು ವೀಲ್‌ಚಯರ್‌ನಲ್ಲಿಯೇ ಓಡಾಟ ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ಶಾಲೆಯನ್ನೂ ತೊರೆದಿದ್ದ. ಕೆಲ ದಿನದ ಹಿಂದೆ ಈತನ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮನೆಯವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ಗುಣಮುಖರಾದ ಹಿನ್ನೆಲೆಯಲ್ಲಿ ಸೆ.29ರಂದು ಮನೆಗೆ ಬಂದಿದ್ದರು. ಸೆ.30ರಂದು ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿ ಬಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ಬಾಲಕ ತಂದೆ ಮಾಯಿಲಪ್ಪ, ತಾಯಿ ಸರೋಜ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.







