ವಿಶ್ರಾಂತ ಧರ್ಮ ಗುರುವಿಗೆ ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ಗುರು ದೀಕ್ಷೆಯ ಸುವರ್ಣ ಸಂಭ್ರಮ

0

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ 1981 ರಿಂದ 1986 ರ ಅವಧಿಯಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿ ಬೆಳ್ತಂಗಡಿ ಧರ್ಮ ಪ್ರಾಂತ್ಯ ದಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಫಾ. ಮಾತ್ಯು ಪೆರುಮ್ಪಳ್ಳಿ ಇವರನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಗುರು ದೀಕ್ಷೆಯ ಸುವರ್ಣ ಸಂಭ್ರಮ ಆಚರಿಸುತ್ತಿರುವ ವಂ| ಧರ್ಮ ಗುರುಗಳನ್ನು ಶಾಲು ಹೊದಿಸಿ ನೆನಪಿನ
ಸ್ಮರಣೆಕೆ ಯನ್ನು ಕೊಟ್ಟು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಚರ್ಚ್ ನ ಟ್ರಸ್ತಿಗಳಾದ ಈಪನ್ ವರ್ಗೀಸ್, ಜೋಬಿನ್ ಟೋಮಿ, ಬಿಜು , ವಂ|ಸಿಸ್ಟೆರ್ ಲಿಸ್ ಮಾತ್ಯು ಉಪಸ್ಥಿತರಿದ್ದರು.ಧರ್ಮ ಗುರುಗಳಾದ ವಂ| ಶಾಜಿ ಮಾತ್ಯು ಹಾಗೂ ಟೊಮಿ ಮಟ್ಟಮ್ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here