ಗಾಂಧಿ ಜಯಂತಿ ರಜೆ ಹಿನ್ನೆಲೆ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ

0

ಸುಬ್ರಹ್ಮಣ್ಯ : ಮೂರು ದಿನಗಳ ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗಾಂಧಿಜಯಂತಿಯ ಸೋಮವಾರ ಹೆಚ್ಚಿನ ಭಕ್ತರ ಆಗಮನವಾಗಿದೆ. ಶನಿವಾರ ಸಂಜೆಯಿಂದಲೇ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರ ಆಗಮನ ಆರಂಭಗೊಂಡಿದೆ. ರವಿವಾರ ಹಾಗೂ ಸೋಮವಾರ ಸರಕಾರಿ ರಜೆಯಾಗಿದ್ದರಿಂದ, ಇದರಿಂದ ದೂರದ ಊರುಗಳಿಂದ ಭಕ್ತರು ದೇವಸ್ಥಾನಗಳಿಗೆ ಆಗಮಿಸಿದ್ದಾರೆ.
ಸರಕಾರಿ ಬಸ್, ಇತರೆ ವಾಹನಗಳಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ದೇವಳದ ರಥ ಬೀದಿ, ಹೊರಾಂಗಣ ದಲ್ಲಿ, ಪೇಟೆಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿದೆ. ವಾಹನಗಳ ಓಡಾಟವು ಅಧಿಕವಾಗಿತ್ತು.

LEAVE A REPLY

Please enter your comment!
Please enter your name here