ಪುತ್ತೂರು ವಲಯ ಗಸ್ತು ಅರಣ್ಯ ಪಾಲಕ ರಾಜುಚಂದ್ರರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರ

0

ಪುತ್ತೂರು:ಅರಣ್ಯ ಇಲಾಖಾ ಶೌರ್ಯ ಮತ್ತು ದಿಟ್ಟತನ ಕರ್ತವ್ಯಕ್ಕೆ 2020/21ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ಪುತ್ತೂರು ವಲಯದ ಗಸ್ತು ಅರಣ್ಯಪಾಲಕರಾದ ರಾಜುಚಂದ್ರರವರಿಗೆ ಸರಕಾರ ವತಿಯಿಂದ ಪ್ರಶಸ್ತಿ ನೀಡಲಾಯಿತು.


ಮುಖ್ಯಮಂತ್ರಿ ಸಿದ್ಧರಾಮಯ್ಯರವರು ರಾಜುಚಂದ್ರರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ರಾಜುಚಂದ್ರರವರು ಸಾಧನೆಗಳಾದ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ನಕ್ಸಲ್ ಹಾವಳಿಯಿಂದ ಕೆರೆಕಟ್ಟೆ ವನ್ಯಜೀವಿ ವಲಯ ಕಛೇರಿಗೆ ಬೆಂಕಿ ಹಾಕಿ ಸುಟ್ಟ ಸಮಯದಲ್ಲಿ ದೃತಿಗೆಡದೆ ಕರ್ತವ್ಯ ನಿರ್ವಹಿಸಿರುತ್ತಾರೆ. ಪುತ್ತೂರು ಶಾಖೆಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ವಿವಿಧ ಅರಣ್ಯ ಅಪರಾಧ ಪತ್ತೆ ಹಚ್ಚಿ 562 ದಿಮ್ಮಿಗಳು, 75.218 ಘಮೀ ಮೋಪು, 19.50 ಘಮೀ ಕಟ್ಟಿಗೆಯನ್ನು ವಶಪಡಿಸಿಕೊಂಡಿರುತ್ತಾರೆ. ಅಕ್ರಮ ಅರಣ್ಯ ಸಂಪತ್ತು ಸಾಗಾಟ ಮಾಡುತ್ತಿದ್ದ 21 ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿರುತ್ತಾರೆ. ಪಿಲಿಗೊಂಡದಲ್ಲಿ ಕೃಷ್ಣ ಮೃಗ ಚರ್ಮವನ್ನು ಸಾಗಾಟ ಮಾಡಲು ಪ್ರಯತ್ನಿಸಿದುದ್ದನ್ನು ತಡೆದು ಎಫ್.ಒ.ಸಿ 40/2016-17ನ್ನು ದಾಖಲಿಸಿರುತ್ತಾರೆ.

LEAVE A REPLY

Please enter your comment!
Please enter your name here