ವಿಟ್ಲ ಪರಿಸರದಲ್ಲಿ ಸರಣಿ ಕಳ್ಳತನ

0

ವಿಟ್ಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆ ವಿಟ್ಲ ಪೇಟೆ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳತನ ನಡೆದಿದೆ. ಮಂಗಳೂರು ರಸ್ತೆಯ ಬೊಬ್ಬೆಕೇರಿ ಎಂಬಲ್ಲಿರುವ ಮದ್ಯದಂಗಡಿ, ಮೇಗಿನಪೇಟೆಯ ಬೇಕರಿ ಹಾಗೂ ಮಂಗಿಲಪದವಿನಲ್ಲಿರುವ ಅಂಗಡಿಯಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಮದ್ಯದಂಗಡಿಯಿಂದ ನಗದು, ಸ್ಪೀಕರ್, ಮದ್ಯದ ಬಾಟಲಿಗಳನ್ನು ಕಳವುಗೈದಿದ್ದಾರೆ. ಮೇಗಿನಪೇಟೆಯ ಬೇಕರಿಯೊಂದರಿಂದ ಹರಕೆ ಡಬ್ಬಿ, ಚಾಕಲೇಟ್, ಮೊಬೈಲ್, ನಗದು ದೋಚಿದ್ದಾರೆ ಎಂದು ಮಾಹಿತಿ ಲಭಿಸಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here