ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆ

0

ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿವರ ಜಯಂತಿಯನ್ನು ಅ.2ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಮಾತನಾಡಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನೀಡಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ ಮಾತನಾಡಿ ವಿದ್ಯಾರ್ಥಿನಿಯರು ದೇಶ ಪ್ರೇಮ ಹಾಗೂ ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಸಹ ಕಾರ್ಯದರ್ಶಿ ಖಾಸಿಂ ಬೈತಡ್ಕರವರು ಮಾತನಾಡಿ ಜೀವನ ಸತ್ಯ, ಅಹಿಂಸೆ ಹಾಗೂ ಪ್ರೀತಿಯಿಂದ ಪರಿಪೂರ್ಣವಾಗುವುದು. ಪ್ರೀತಿ ಜಗತ್ತಿನ ಶಕ್ತಿ. ಪ್ರೀತಿ ಹಾಗೂ ತ್ಯಾಗವನ್ನು ಹರಡುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದರು.


ಶಾಲಾ ಹೆಣ್ಮಕ್ಕಳ ಸುರಕ್ಷಾ ಸಮಿತಿಯ ಸಂಯೋಜಕಿ ಶ್ವೇತಾ ಮಾತನಾಡಿ ಹಿಂದಿನ ತಲೆಮಾರುಗಳು ನೀಡಿದ ಸಂಪನ್ಮೂಲಗಳನ್ನು ನಾವು ಹಾಳು ಮಾಡದೇ ಉಪಯೋಗಿಸುವ ಮೌಲ್ಯ ನಮ್ಮಲ್ಲಿರಬೇಕು. ವಿದ್ಯಾರ್ಥಿಗಳು ಛಲ ಹಾಗೂ ಆತ್ಮಶಕ್ತಿಯಿಂದ ಸಾಧನೆ ಮಾಡಿ, ನಮ್ಮನ್ನು ಜನರು ಸದಾ ಸ್ಮರಿಸುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ರೋಸಲಿನ್ ಲೋಬೊ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯಕುಮಾರಿ, ರಕ್ಷಕ ಶಿಕ್ಷಕ ಸಂಘದ ಜೊತೆಕಾರ‍್ಯದರ್ಶಿ ಕಾಸಿಂ ಬೈತಡ್ಕ, ಹೆಣ್ಮಕ್ಕಳ ಸುರಕ್ಷಾ ಸಮಿತಿ ಸಂಯೋಜಕಿ ಶ್ವೇತಾ ಕೆ, ಶಾಲಾ ನಾಯಕಿ ಫಾತಿಮ ಖಾಸಿಂ ಹಾಗೂ ಕ್ವಿಜ್ ಹಾಗೂ ವೈ.ಎಸ್.ಎಮ್ ಸಂಘದ ಅಧ್ಯಕ್ಷೆ ಜೇಷ್ಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮವು ಗೈಡ್ಸ್ ವಿದ್ಯಾರ್ಥಿನಿಯರ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿನಿ ರೀಶಲ್ ಮಸ್ಕರೇನ್ಹಸ್‌ರವರು ಹಾಗೂ ವೈಷ್ಣವಿ ದಿನದ ಮಹತ್ವವನ್ನು ತಿಳಿಸಿದರು. ಜೇಷ್ಠ ಸ್ವಾಗತಿಸಿ, ಧೃತಿ ವಂದಿಸಿದರು. ನಿಫ್ನಾ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘ ಮತ್ತು ವಿದ್ಯಾರ್ಥಿನಿಯರ ಸಹಕಾರದೊಂದಿಗೆ ಶಾಲಾ ವಠಾರವನ್ನು ಸ್ವಚ್ಛಗೊಳಿಸಲಾಯಿತು.

LEAVE A REPLY

Please enter your comment!
Please enter your name here