ವಿದ್ಯಾರಶ್ಮಿಯಲ್ಲಿ ಗಾಂಧೀ ಜಯಂತಿ

0

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 149ನೆ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ವಠಾರ ಸ್ವಚ್ಛತೆ ನೆರವೇರಿಸಿದ ಬಳಿಕ ನಡೆದ ಸಭಾಕಾರ್ಯಮವನ್ನು ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈಯವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ನಾವು ಇತಿಹಾಸವನ್ನು ನೆನಪಿಡಬೇಕಿದೆ. ಗಾಂಧೀಜಿಯವರು ಮಾಡಿದ ಸಾಧನೆ ಅತಿ ವಿಶೇಷವಾದದ್ದು ಮತ್ತು ಅವರ ಜೀವನಾದರ್ಶಗಳನ್ನು ನಾವು ಅನುಸರಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕಿ ಪರಿಮಳಾ ಎನ್.ಎಂ. ಅವರನ್ನು ಸನ್ಮಾನಿಸಿದರು.


ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ಭಾರತದಲ್ಲಿ ಏಕಾಂಗಿಯಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವರು ಮಹಾತ್ಮ ಗಾಂಧೀಜಿ ಎಂದು ಹೇಳಿ ಇಂದು ನಾವು ಸ್ವಾತಂತ್ರ್ಯವನ್ನು ಬೇಕಾಬಿಟ್ಟಿ ದುರುಪಯೋಗ ಮಾಡುತ್ತಿದ್ದೇವೆ, ಇದು ನಿಲ್ಲಬೇಕು ಎಂದರು. 8ನೆ ತರಗತಿ ವಿದ್ಯಾರ್ಥಿನಿ ಅಪೂರ್ವ ಗೋಕುಲ್‌ದಾಸ್ ಮತ್ತು ಆಂಗ್ಲಭಾಷಾ ಶಿಕ್ಷಕಿ ತೇಜಸ್ವಿಯವರು ಗಾಂಧೀ ಜೀವನದ ಕುರಿತು ಭಾಷಣ ಮಾಡಿದರು.


ವಿದ್ಯಾರ್ಥಿನಿಯರಾದ ಪ್ರೇಕ್ಷಾ, ಅಪೂರ್ವ, ಇಂಚರ ಮತ್ತು ಜೀವಿತಾ ಅವರು ಪ್ರಾರ್ಥನೆ ಮತ್ತು ಸರ್ವಧರ್ಮ ಭಜನೆಗಳನ್ನು ನೆರವೇರಿಸಿದರು. ಪ್ರಾಂಶುಪಾಲ ಸೀತಾರಾಮ ಕೇವಳ ಸಾಧಕಿ ಶಿಕ್ಷಕಿಯನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 9ನೆ ತರಗತಿ ಜೀವಿತಾ ವಂದನಾರ್ಪಣೆ ಮತ್ತು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪ್ರೇಕ್ಷಾ ಎನ್.ಸಿ. ಅವರು ಕಾರ್ಯಕ್ರಮ ನಿರೂಪಣೆಗಳಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here