ಕೋಚಕಟ್ಟೆ: ಧಾರ್ಮಿಕ ಮತ ಪ್ರವಚನದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ

0

ಪೆರಾಬೆ: ಕೋಚಕಟ್ಟೆ ನೂರುಲ್ ಹುದಾ ಮದ್ರಸ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ. ಅ)ರವರ ಜನ್ಮ ದಿನದ ಪ್ರಯುಕ್ತ ಅ.14 ಮತ್ತು 15ರಂದು ನಡೆಯುವ ಮಿಲಾದ್ ಸಮಾವೇಶ ಹಾಗೂ ಧಾರ್ಮಿಕ ಉಪನ್ಯಾಸದ ಪೋಸ್ಟರನ್ನು ಮದ್ರಸದ ಸ್ಥಾಪಕಾಧ್ಯಕ್ಷ ಅಹ್ಮದ್ ಹಾಜಿ ಅಜ್ಮೀರ್‌ರವರು ಬಿಡುಗಡೆ ಮಾಡಿ ಕಾರ್ಯಕ್ರಮದ ಪ್ರಚಾರಕ್ಕೆ ಚಾಲನೆ ನೀಡಿದರು.


ಮದ್ರಸ ಅಧ್ಯಾಪಕ ಫಾರೂಕ್ ದಾರಿಮಿಯವರು ಕಾರ್ಯಕ್ರಮದ ಯಶಸ್ಸಿಗೆ ದುಃವಾ ನೆರವೇರಿಸಿ ಮಾತನಾಡಿ, ಅ.14ರಂದು ಬೆಳಿಗ್ಗೆ 8ಗಂಟೆಗೆ ಮದ್ರಸ ಅಧ್ಯಕ್ಷ ಬಶೀರ್ ಕೆ.ಪಿ.ಅವರು ದ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 4 ಗಂಟೆಗೆ ಕುಂತೂರು ಮುದರ್ರಿಸ್ ಉಸ್ತಾದ್‌ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ, ನಂತರ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮ, ಕುಂತೂರು ದರ್ಸ್ ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್, ಬಹುಮಾನ ವಿತರಣೆ ಹಾಗೂ ಹಾಜಿ ಮೋಯಿದು ಫೈಝಿ ಉಸ್ತಾದರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಅ.೧೫ರಂದು ಪಾಣಕ್ಕಾಡ್ ರಶೀದಲಿ ಶಿಹಾಬ್ ತಂಙಳ್‌ರವರ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂತರ್ ರಾಷ್ಟ್ರಿಯ ವಾಗ್ಮಿ ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here