ಆಲಂಕಾರು ದುರ್ಗಾಂಬಾ ಪ.ಪೂ ಕಾಲೇಜಿನ ಬಾಲಕಿಯರ ವಾಲಿಬಾಲ್ ತಂಡ ರಾಜ್ಯ ಮಟ್ಟಕ್ಕೆ

0

ಆಲಂಕಾರು:ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಅಲಂಕಾರು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು, ಅಲಂಕಾರಿನ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯರಾದ ತೃಪ್ತಿ ಬಿ, ಅನುಷಾ ಎಮ್, ಧನ್ಯಶ್ರೀ, ದೀಕ್ಷಾ, ರೂಪಿಕ ಬಿ, ಕೃತಿ ಕೆ ಎಸ್, ಚೈತ್ರ, ಹರ್ಷ, ಹರ್ಷಿತ, ಶ್ರಾವ್ಯ ಐ, ಸಂದ್ಯಾ,ಅನಘ ಲಕ್ಷ್ಮಿ, ಲತೀಕ್ಷ , ಇವರು ತಂಡವನ್ನು ಪ್ರತಿನಿಧಿಸಿದ್ದರು.ಇವರಿಗೆ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೇಯಸ್ಸು ರೈಯವರು ತರಬೇತಿ ನೀಡಿದ್ದರು.ಕನ್ನಡ ಉಪನ್ಯಾಸಕಿಯಾದ ರೂಪಾ ಎಂ.ಟಿ ಅವರು ತಂಡದ ಮೇಲ್ವಿಚಾರಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here