ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹಾದೂರ್ ಶಾಸ್ರ್ರೀ ಜಯಂತಿ ಆಚರಣೆ ಅ. 2 ರಂದು ಜರುಗಿತು. ವೀರ ಯೋಧ ನವೀನ್ ಕುಮಾರ್ ಎ ಕೆ ಸಂಪಾಜೆಯವರು ಮುಖ್ಯ ಅತಿಥಿಯಾಗಿ,ರಾಷ್ಟ್ರಪ್ರೇಮದ ಬಗ್ಗೆ,ಮಕ್ಕಳು ಸೈನ್ಯಕ್ಕೆ ಸೇರುವ ಮನಸ್ಸು ಮಾಡ್ಬೇಕು,ದೇಶಸೇವೆ ಮಾಡ್ಬೇಕು,ಅಗ್ನಿವೀರ್ ಸೇನೆಗೆ ಸೇರ್ಬೇಕು,ತಾನು ಸೈನ್ಯದಲ್ಲಿ ಮಾಡಿದ ಸೇವೆ,ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ ಬಗ್ಗೆ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಎಚ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಗುರು ನಿಂಗರಾಜು ಕೆ ಪಿ,ಶಾಲಾ ಎಸ್ ಡಿ ಎಮ್ ಸಿ ಸದಸ್ಯರಾದ ಉಮ್ಮರ್ ಅಬಾಬಿಲ್, ಅಶ್ರಫ್ ಜನತಾ,ಶಾಂತರಾಮ ಪೂಜಾರಿ, ಸುರೇಶ್ ಶಾಂತಿನಗರ,ಶ್ರೀಮತಿ ಸುರೇಖ ಕೇಶವ,ಶಾಲಾ ಅಧ್ಯಾಪಕರಾದ ಬಾಲಕೃಷ್ಣ ಕೆ, ತುಳಸಿ ಎಚ್,ಶ್ರೀಮತಿ ಮೇಬಲ್ ರೋಡ್ರಿಗಸ್,ಆಶಾ ಎಮ್, ಮೋಕ್ಷ ಜೆ ರೈ, ಹರ್ಷಿಣಿ ಮಾಲೆತ್ತಾರು,ಅಶ್ವಿಣಿ ಸೋಂಪಾಡಿ ಉಪಸ್ಥಿತರಿದ್ದರು. ಶಾಲಾ ಪರಿಸರವನ್ನು ಸ್ವಚ್ಚಮಾಡುವುದರ ಮೂಲಕ ಗಾಂಧಿಜಯಂತಿ ಮತ್ತುಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ಆಚರಿಸಲಾಯಿತು.