ಉಪ್ಪಿನಂಗಡಿಯಲ್ಲಿ ‘ಡ್ರಗ್ಸ್ ಮುಕ್ತ ಗ್ರಾಮ’ ಜನಜಾಗೃತಿ ಜಾಥಾ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಅಟೋ ಚಾಲಕ- ಮಾಲಕರ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ವಿವಿಧ ಸಮಾಜಮುಖಿ ಸಂಘಟನೆಗಳು ಮತ್ತು ಪರಿಸರದ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಉಪ್ಪಿನಂಗಡಿಯಲ್ಲಿ ಅ.2ರಂದು ಡ್ರಗ್ಸ್ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನದಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು.

“ಮಾದಕ ವ್ಯಸನ ತೊಲಗಿಸೋಣ, ಸುಂದರ ಸಮಾಜ ಸೃಷ್ಟಿಸೋಣ” ಎಂಬ ಘೋಷ ವಾಕ್ಯದೊಂದಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭವಾದ ಕಾಲ್ನಡಿಗೆ ಜಾಥಾ ಗಾಂಧಿಪಾರ್ಕ್ ತನಕ ತೆರಳಿ ಬಳಿಕ ಅಲ್ಲಿಂದ ವಾಪಸ್ಸಾಗಿ ಹೊಸ ಬಸ್ ನಿಲ್ದಾಣದ ಬಳಿ ಸಮಾರೋಪ ಕಾರ್ಯಕ್ರಮ ನಡೆಸಲಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜಮುಖಿ ಸಂಘಟನೆಗಳ ಪ್ರಮುಖರು ಜಾಥಾದಲ್ಲಿ ಭಾಗವಹಿಸಿದರು.


ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡ್ರಗ್ಸ್‌ನ ಅಮಲು ಹಾಗೂ ಮತಾಂಧತೆಯ ಅಮಲು ಸಮಾಜಕ್ಕೆ ಮಾರಕವಾಗಿದೆ. ಮಾದಕ ದ್ರವ್ಯಗಳ ವಿರುದ್ಧದ ಆಂದೋಲನ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ನಿರಂತರವಾಗಬೇಕು. ಇದರ ಹಿಂದಿರುವ ಮುಖ್ಯ ಕಿಂಗ್‌ಫಿನ್‌ಗಳ ಬುಡ ಒಡೆಯುವ ಕೆಲಸವಾಗದೇ ಇದರ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ. ಡ್ರಗ್ಸ್, ಗಾಂಜಾದಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಜನಸಾಮಾನ್ಯರು ಮಾಹಿತಿ ನೀಡಿದರೆ ಅವರ ಹೆಸರುಗಳನ್ನು ಗೌಪ್ಯವಾಗಿಡುವುದು ಹಾಗೂ ಅವರಿಗೆ ರಕ್ಷಣೆಯನ್ನು ನೀಡುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಡ್ರಗ್ಸ್ ವಿರುದ್ಧದ ಆಂದೋಲನ ಕೇವಲ ಸಾಮಾಜಿಕ ಸಂಘಟನೆಗಳು, ಎನ್‌ಜಿಒಗಳ ಜವಾಬ್ದಾರಿಯಲ್ಲ. ರಾಜಕಾರಣಿಗಳು ಇದನ್ನು ತಮ್ಮ ಅಜೆಂಡಾವನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಡ್ರಗ್ಸ್ ಮುಕ್ತ ಸಮಾಜ ನಮ್ಮದಾಗಲು ಸಾಧ್ಯ ಎಂದರು.


ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾತನಾಡಿ, ಸಾಮಾಜಿಕವಾಗಿ ಹೋರಾಟಗಳು ನಡೆದಾಗ ಮಾತ್ರ ಡ್ರಗ್ಸ್ ಮುಕ್ತ ಸಮಾಜ ನಮ್ಮದಾಗಲು ಸಾಧ್ಯ. ಮಾದಕ ವ್ಯಸನಿಗೆ ಕಾನೂನಿನ ಶಿಕ್ಷೆಗಿಂತಲೂ ಅವರ ಮನ ಪರಿವರ್ತನೆ ಮಾಡುವ ಕೆಲಸವಾಗಬೇಕು. ಯುವ ಜನತೆ ಉತ್ತಮವಾಗಿದ್ದಾಗ ಮಾತ್ರ ದೇಶದ ಭವಿಷ್ಯ ಸದೃಢವಾಗಲು ಸಾಧ್ಯ. ಮಾದಕ ವ್ಯಸನವನ್ನು ತಡೆಯಲು ಪ್ರತಿ ಮನೆಯ ಕೊಡುಗೆ ಬೇಕು ಎಂದರು.


ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಮಾತನಾಡಿ, ಮನೆಯಲ್ಲಿ ಹೆತ್ತವರು ಮಕ್ಕಳ ಬಗ್ಗೆ ಕಾಳಜಿ ಇಡಬೇಕು. ಡ್ರಗ್ಸ್ ಮುಕ್ತ ಭಾರತವಾದಾಗ ಮಾತ್ರ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯ ಎಂದರು.
ಎಂ.ಎಂ. ಮೆಹ್ರೂಫ್ ಸುಲ್ತಾನ್ ಮಾತನಾಡಿ, ಗಾಂಧಿ ಜಯಂತಿಯೆನ್ನುವುದು ಒಂದು ದಿನ ಹಾರ ಹಾಕಲು ಮಾತ್ರ ಸೀಮಿತವಾಗಿರಬಾರದು. ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಸಮೂಹ ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದ್ದು, ಸ್ವಾಸ್ಥ್ಯ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.


ಜಾಥಾವನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಉದ್ಟಾಟಿಸಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಮಾಲಿಕುದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಚ್. ಯೂಸುಫ್ ಹಾಜಿ, ಅನುಗ್ರಹ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ., ಕಾಂಗ್ರೆಸ್ ಸೇವಾದಳದ ಸಿದ್ದೀಕ್ ಕೆಂಪಿ, ಅಭಿಯಾನದ ಸಂಚಾಲಕ ಇರ್ಷಾದ್ ಯು.ಟ., ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಶ್ರೀಧರ್ ಭಟ್, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ., ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುರ್ರಶೀದ್, ಸಣ್ಣಣ್ಣ, ಆರೋಗ್ಯ ಸಹಾಯಕಿ ಶ್ರೀಮತಿ ಗಾಯತ್ರಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಸಂಯೋಜಕ ರಮೇಶ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಂದನಾ ಶರತ್, ಪ್ರಮುಖರಾದ ಶುಕೂರ್ ಹಾಜಿ ಶುಕ್ರಿಯಾ, ಸೈಯ್ಯದ್ ಇಸ್ಮಾಯೀಲ್ ತಂಙಳ್, ಝಕಾರಿಯಾ ಕೊಡಿಪ್ಪಾಡಿ, ಸುಧಾಕರ ಶೆಟ್ಟಿ, ಕೈಲಾರು ರಾಜಗೋಪಾಲ ಭಟ್, ಹಮೀದ್ ಮೆಜೆಸ್ಟಿಕ್, ನಿಶಾ ಬಾನು, ರಿಯಾಝ್ ಇಂಡಿಯನ್, ಇಬ್ರಾಹೀಂ ಆಚಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ನೇತ್ರಾವತಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಅಧ್ಯಕ್ಷ ಫಾರೂಕ್ ಜಿಂದಗಿ, ಉಪಾಧ್ಯಕ್ಷ ಹನೀಫ್ ಆತ್ಮೀಯ, ಜೊತೆ ಕಾರ್ಯದರ್ಶಿ ಅಶೋಕ್ ಬಂಡಾಡಿ, ಸಂಘಟನಾ ಕಾರ್ಯದರ್ಶಿ ಕಲಂದರ್ ಶಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ವಿಜಯಕುಮಾರ್ ಶೆಟ್ಟಿ, ಮಜೀದ್ ರಾಮನಗರ, ಚಂದ್ರಶೇಖರ ಪುಳಿತ್ತಡಿ, ಪ್ರದೀಪ್ ದುರ್ಗಾಗಿರಿ, ಯಾಕೂಬ್ ಕೆಮ್ಮಾರ, ಅಮೀರ್ ಕೊಪ್ಪಳ, ಬಶೀರ್ ಗಾಂಧಿಪಾರ್ಕ್, ಚಿದಾನಂದ ಮೈತಳಿಕೆ, ಹೇಮಂತ್ ಮೈತ್ತಳಿಕೆ, ಪದ್ಮನಾಭ ಬಿಳಿಯೂರು, ರಾಘವೇಂದ್ರ ನಟ್ಟಿಬೈಲು, ಅಣ್ಣಿ ಮಲ್ಲಕಲ್ಲು ಮತ್ತಿತರರು ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಸ್ವಾಗತಿಸಿದರು. ಅಟೋ ರಿಕ್ಷಾ ಸಂಘದ ಆಶೀಫ್ ಕೊಯಿಲ ವಂದಿಸಿದರು. ಗ್ರಾ.ಪಂ. ಸದಸ್ಯ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here