ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಹಾಗೂ ದೇವಸ್ಥಾನದಲ್ಲಿ ನಡೆಸಲ್ಪಡುವ ವಿವಿಧ ಕಾರ್ಯಕ್ರರಮಗಳ ಬಗ್ಗೆ ಪೂರ್ವಭಾವಿ ಸಭೆಯು ಸೆ.1 ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇವಸ್ಥಾನದ ರಾಜಾಂಗಣದ ನಾಲ್ಕು ಬದಿಗೂ ಮುಚ್ಚಿಗೆ ಹೊದಿಸುವ ಬಗ್ಗೆ ತೀರ್ಮಾನಿಸಲಾಗಿದೆ.ಇದಕ್ಕೆ ಸುಮಾರು 45 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಈ ಬಗ್ಗೆ ಗ್ರಾಮಸ್ಥರು ಧನ ಸಹಾಯ ನೀಡಿ ಸಹಕರಿಸುವಂತೆ ಮನವಿ ಮಾಡಿ ಅವರು ಮುಂದೆ ಕ್ಷೇತ್ರದಲ್ಲಿ ಅಯುಧ ಪೂಜೆ,  ಕಾರ್ತಿಕ ಮಾಸದ ಲಕ್ಷ ದೀಪೋತ್ಸವ,ನವರಾತ್ರಿ ಉತ್ಸವ, ನಡೆಯಲಿದೆ ಎಂದು ಹೇಳಿದರು. ಈ ಎಲ್ಲಾ ವಿಷಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ನಿರ್ಧಾರ  ಕೈಗೊಳ್ಳಲಾಯಿತು.

ಧನ ಸಹಾಯಕ್ಕೆ ವಾಗ್ದಾನ:-
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್,  ಉದ್ಯಮಿ ಸತೀಶ್ ರೈ ಕಟ್ಟಾವು ಹಾಗೂ ಶಂಕರ ನಾರಾಯಣ ಭಟ್,  ತಲಾ 1 ಲಕ್ಷ ರೂಪಾಯಿ ನೀಡುವ ಬಗ್ಗೆ ವಾಗ್ದಾನ ನೀಡಿದರು. ಉಳಿದಂತೆ ಹಲವರಿಂದ 25 ಸಾವಿರ ರೂಪಾಯಿಗಳ ವಾಗ್ದಾನಗಳು ಬಂತು.ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ  ಹಿರಿಯರಾದ ನಾರಾಯಣ ಭಟ್ ಪಟ್ಟೆ ಉಪಸ್ಥಿತರಿದ್ದರು.

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಉತ್ಸವ ಸಮಿತಿ ಸದಸ್ಯರು ಮತ್ತು ವಿವಿಧ ಸಮಿತಿ ಪದಾಧಿಕಾರಿಗಳು ಸದಸ್ಯರು ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಮರಮಟ್ಟುಗಳನ್ನು ನೀಡಿದ ದಾನಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಸಮಿತಿ ರಚನೆ:-
ದೇವಸ್ಥಾನದಲ್ಲಿ ನಡೆಸಲ್ಪಡುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ದೇವಸ್ಥಾನದಕ್ಕೆ ತಗಲುವ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕೆಲವೊಂದು ಸಮಿತಿ ರಚನೆ ಮಾಡಲಾಯಿತು.ಅಯುಧ ಪೂಜಾ ಸಮಿತಿ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಮಂಗಳಾದೇವಿ, ಕಾರ್ಯದರ್ಶಿಯಾಗಿ ಸುಬ್ಬಯ್ಯ ರೈ ಹಲಸಿನಡಿ ಕೋಶಾಧಿಕಾರಿಯಾಗಿ ಲಿಂಂಗಪ್ಪ ಗೌಡ ಮೋಡಿಕೆ.ಕಾರ್ತಿಕ ಮಾಸದ ಲಕ್ಷ ದೀಪ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ, ಕಾರ್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ನವರಾತ್ರಿ ಉತ್ಸಾಹ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಆಳ್ವ ಗಿರಿಮನೆ, ಕಾರ್ಯದರ್ಶಿಯಾಗಿ  ಸುಬ್ಬಯ್ಯ ರೈ ಹಲಸಿನಡಿ, ಕೋಶಾಧಿಕಾರಿ ಶಿವಪ್ರಸಾದ್ ಮೋಡಿಕೆ,ಮಹಿಳಾ ಸಮಿತಿ ಅಧ್ಯಕ್ಷರಾಗಿ ಶಂಕರಿ ಪಟ್ಟೆ, ಸಂಚಾಲಕರಾಗಿ ಪುಷ್ಪಲತಾ ಎಂ, ಶ್ರೀಮತಿ ಕೆ ಸುಧಾ ಎಸ್‌ ರೈ ಕಟ್ಟಾವು , ರೇಖಾ ನಾಗರಾಜ್ ಪಟ್ಟೆ, ಉಮಾವತಿ ಕಟ್ಟಾವು ಇವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here