ಅ.6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ

0

204 ಕಂಪೆನಿಗಳು ,ಸಾವಿರಾರು ಉದ್ಯೋಗ,ಗ್ರಾಮೀಣ ವಿದ್ಯಾರ್ಥಿಗಳಿಗೆ ಸುರ್ಣವಕಾಶ

ಪುತ್ತೂರು: ಅ.7 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು ಮೇಳದಲ್ಲಿ ಭಾಗವಹಿಸುವ ಸಾವಿರಾರು‌ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು,ಬಿ ಎ ,ಬಿಕಾಂ, ಬಿಎಸ್ಸಿ ಹಾಗೂ ಇನ್ನಿತರ ಪಧವೀದರರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸಣ್ಣ ಉದ್ಯೋಗದಿಂದ ಆರಂಭಗೊಂಡು ದೊಡ್ಡ ಹುದ್ದೆಯವರೆಗೂ ಮೇಳದಲ್ಲಿ ಆಯ್ಕೆಗಳು ನಡೆಯುತ್ತದೆ ಎಂದು ಹೇಳಿದರು.

ದ ಕ ಜಿಲ್ಲೆಯವರು ಹಿಂದೇಟು ಹಾಕುತ್ತಿದ್ದಾರೆ : ವಿವೇಕ ಆಳ್ವ

ಸಭೆಯಲ್ಲಿ‌ಮಾತನಾಡಿದ‌ ಉದ್ಯೋಗ‌ಮೇಳದ ರುವಾರಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ ಆಳ್ವರವರು ಮಾತನಾಡಿ ದ ಕ ಮತ್ತು ಉಡುಪಿ ಜಿಲ್ಲೆಯವರು ಉದ್ಯೋಗ ಮೇಳಕ್ಕೆ ಬರುವುದು ಅಪರೂಪ ಎಂಬಂತಾಗಿದೆ. ಸಾವಿರಾರು ಮಂದಿ ಭಾಗವಹಿಸುವ ಮೇಳದಲ್ಲಿ‌ಬೆರಳೆಣಿಕೆಯ‌ ಮಂದಿ ಮಾತ್ರ ನಮ್ಮ‌ಜಿಲ್ಲೆಯವರು ಭಾಗವಹಿಸುತ್ತಾರೆ. ಸಾವಿರಾರು ಮಂದಿ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಪ್ರತಿಷ್ಟಿತ ಕಂಪೆನಿಗಳು ಭಾಗವಹಿಸುವ ಕಾರಣ ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಎಂದು‌ಮನವಿ ಮಾಡಿದರು. ಕೆಲಸ ಇಲ್ಲ ಎಂಬುದು ಸುಳ್ಳು ನಮಗೆ ಕೆಲಸ ಮಾಡಲು ಇಚ್ಚಾಶಕ್ತಿ ಇದ್ದರೆ ಸಾಕಷ್ಟು ಕೆಲಸಗಳು ಇದೆ. ವರ್ಷದ 365 ದಿನವೂ ಆಳ್ವಾಸ್ ಸಂಸ್ಥೆಯಲ್ಲಿ ಉದ್ಯೋಗ ನೋಂದಣಿ ನಡೆಯುತ್ತಿರುತ್ತದೆ ಎಂದು ಹೇಳಿದರು. ಮೆಕ್ಯಾನಿಕ್ ,ಇಲೆಕ್ಟ್ರಿಕ್,ಐಟಿಐ, ಡಿಪ್ಲೊಮಾ ; ,2000 ಹುದ್ದೆಗಳು ಇದೆ. ಈ ಕೋರ್ಸುಗಳನ್ನು‌ಮಾಡಿದವರಿಗೆ ಸೇರಿದಂತೆ ಇತರ ಡಿಗ್ರಿ, ಮಾಸ್ಟರ್ ಡಿಗ್ರಿಯಾದವರಿಗೂ ಸಾವಿರಾರು ಉದ್ಯೋಗ ಇದ್ದು, ವಿದೇಶಿ ಕಂಪೆನಿಗಳು‌ಮೇಳದಲ್ಲಿ ಭಾಗವಹಿಸುತ್ತಿದೆ ಎಂದು ವಿವೇಕ್ ಆಳ್ವ ತಿಳಿಸಿದರು.

ಕರೆಂಟ್ ಕಂಬ ಹತ್ತುವ ತರಬೇತಿ

ಪುತ್ತೂರು ಸೇರಿದಂತೆ ಜಿಲ್ಲೆಯಾಧ್ಯಂತ ಮೆಸ್ಕಾಂ ನಲ್ಲಿ ಕಾರ್ಮಿಕರ ಕೊರತೆ ಇದೆ. ಇದಕ್ಕಾಗಿ ಆಸಕ್ತಿ ಇರುವ ಮಂದಿಗೆ ಕರೆಂಟ್ ಕಂಬ ಹತ್ತುವ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಪೊಲೀಸ್ ಹುದ್ದೆಗೆ ಕೆಲವೇ ತಿಂಗಳಲ್ಲಿ ನೇಮಕಾತಿ ನಡೆಯಲಿದ್ದು ಪೊಲೀಸ್ ಹುದ್ದೆಗೂ ತರಬೇತಿ ನೀಡುವ ಕೆಲಸ ನಮ್ಮ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಶಾಸಕರು ಹೇಳಿದರು.

ಉಚಿತ ಬಸ್ ವ್ಯವಸ್ಥೆ

ಆಳ್ವಾಸ್ ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಅ.6 ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಿಂದ ಬಸ್ ಹೊರಡಲಿದೆ. ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಭೇಟಿಯಾಗಿ ಹೆಸರು‌ನೋಂದಾವಣೆ ಮಾಡಿಕೊಳ್ಳಬಹುದು ಎಂದು‌ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಳದ ಸಂಘಟಕರಾದ ಶ್ರೀನಿವಾಸ್, ಪುತ್ತೂರು ಐಟಿಐ ಪ್ರಚಾರ್ಯರಾದ ಪ್ರಕಾಶ್ ಪೈ, ಅಕ್ಷಯ ಕಾಲೇಜಿನ ಸಂಪತ್,ಫಿಲೋಮಿನಾ ಕಾಲೇಜಿನ ಭಾರತಿ ಎಸ್ ರೈ, ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅಪ್ಪು,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀಕಾಂತ್,ವಿಟ್ಲ ಸರಕಾರಿ ಪ್ರಥಮ ಕಾಲೇಜಿನ ಪದ್ಮನಾಭ, ಬೆಟ್ಡಂಪಾಡಿ ಕಾಲೇಜಿನಡಾ. ಕಾಂತೇಶ್,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗೋಪಾಲಕೃ್ಷ್ಣ ಉಪಸ್ಥಿತರಿದ್ದರು.
ರೈ ಎಜುಕೇಶನಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಸದಸ್ಯರುಗಳಾದ ರಿತೇಶ್ ಶೆಟ್ಟಿ, ಜಯಪ್ರಕಾಶ್ ಬದಿನಾರ್, ಯೋಗೀಸ್ ಸಾಮಾನಿ, ರಾಕೇಶ್ ರೈ ಕುದ್ಕಾಡಿ ಉಪಸ್ಥಿತರಿದ್ದರು. ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ ಸ್ವಾಗತಿಸಿದರು.‌ಮಹಮ್ಮದ್ ಬಡಗನ್ನೂರು ವಂದಿಸಿದರು.

LEAVE A REPLY

Please enter your comment!
Please enter your name here