ಪುತ್ತೂರು: ಬೀರಮಲೆ ನಿವಾಸಿ ದಿ.ನಾರಾಯಣ ಆಚಾರ್ಯರ ಪುತ್ರ ಚಿನ್ನದ ಕುಸುರಿ ಕೆಲಸಗಾರರಾಗಿದ್ದ ಬಾಲಕೃಷ್ಣ ಆಚಾರ್ಯ(ವ.64) ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.1ರಂದು ನಿಧನರಾದರು.
ಮೃತರು ಪತ್ನಿ ಮಹೇಶ್ವರೀ, ಮಕ್ಕಳಾದ ಗೌರಿ, ಮಚ್ಚೆಂದ್ರ ಆಚಾರ್ಯ (ಪುತ್ತೂರು ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಉದ್ಯೋಗಿ), ಸೋಮನಾಥ ಆಚಾರ್ಯ, ಅಳಿಯ ದಿನೇಶ್ ಆಚಾರ್ಯ ಬೇಕೂರು, ಸಹೋದರರಾದ ಕೊಗ್ಗಪ್ಪ ಆಚಾರ್ಯ, ಮೋಹನ ಆಚಾರ್ಯ, ವಸಂತ ಆಚಾರ್ಯ, ಸಹೋದರಿ ಜಯಂತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.