ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ರವರ ಅಧ್ಯಕ್ಷತೆಯಲ್ಲಿ ಸೆ.27 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಬಡಗನ್ನೂರುಃ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವರನ್ನು ಹೆಚ್ಚುವರಿಯಾಗಿ ನೆಟ್ಟನಿಗೆ ಮೂಡ್ನೂರು ಗ್ರಾ.ಪಂ ಗೆ ಕರ್ತವ್ಯಕ್ಕೆ ಅದೇಶ ಮಾಡಿದ ಬಗ್ಗೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆ ಪ್ರಾರಂಭದಲ್ಲೇ ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಮಾತನಾಡಿ, ಬಡಗನ್ನೂರು ಗ್ರಾ.ಪಂ ನಲ್ಲಿ ಪ್ರಸ್ತುತ ಕಾರ್ಯದರ್ಶಿ ಹುದ್ದೆ ತೆರವಾಗಿದೆ. ನಮ್ಮಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿ ಶಾರದ ನೆಟ್ಟನಿಗೆ ಮೂಡ್ನೂರು ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಬಗ್ಗೆ ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರವರನ್ನು ಭೇಟಿ ಬಡಗನ್ನೂರು ಗ್ರಾ.ಪಂ ಗೆ ಕಾರ್ಯದರ್ಶಿ ನೇಮಕ ಮಾಡಬೇಕು.ಮತ್ತು ನೇಮಕಾತಿ ಆಗುವ ತನಕ ಹೆಚ್ಚುವರಿ ಕರ್ತವ್ಯ ಕಾರ್ಯದರ್ಶಿ ಅದೇಶ ಮಾಡುವ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಈಗ ಇದೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಹೆಚ್ಚುವರಿಯಾಗಿ ನೆ.ಮೂಡ್ನೂರು ಗ್ರಾ.ಪಂ. ಗೆ ಅದೇಶ ಹೊರಡಿಸಿ ವಾರದ ಮೂರು ದಿವಸ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಸರಿಯಾ ಎಂದು ಪ್ರಶ್ನಿಸಿದ ಅವರು ಹಾಗಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ ಎಂದ ಅವರು ಪಿಡಿಒ ರವರನ್ನು ಈ ಪಂಚಾಯತಿನಲ್ಲಿಯೇ ಖಾಯಂ ಆಗಿ ಇರಬೇಕು. ಮತ್ತು ಕಾರ್ಯದರ್ಶಿ ನೇಮಕ ಆಗುವವರೆಗೆ ಹೆಚ್ಚುವರಿ ಕಾರ್ಯದರ್ಶಿ ಅದೇಶ ಮಾಡುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲು ಒತ್ತಾಯಿಸಿದರು.
ಈ ಬಗ್ಗೆ ಸದಸ್ಯ ರವಿರಾಜ ರೈ ಸಜಂಕಾಡಿ ಪ್ರತಿಕ್ರಿಯಿಸಿ ಮಾತನಾಡಿ , ಪಿಡಿಒ ರವರನ್ನು ನೆ.ಮೂಡ್ನೂರು ಗ್ರಾ.ಪಂ ಗೆ ಕರ್ತವ್ಯಕ್ಕೆ ಅದೇಶ ಮೊದಲು ಸಿ.ಇ.ಒ ರವರಲ್ಲಿ ಮಾತನಾಡಿದ್ದೇನೆ.ನೆ.ಮೂಡ್ನೂರು ದೊಡ್ಡ ಪಂಚಾಯತ್ .ಅದರಿಂದ ಒಂದು ತಿಂಗಳ ಮಟ್ಟಿಗೆ ಮಾತ್ರ ಹೆಚ್ಚುವರಿ ಕರ್ತವ್ಯ ಅದೇಶ ಮಾಡಲಾಗಿದೆ. ಆ ಬಳಿಕ ಪಿಡಿಒ ಖಾಯಂ ಆಗಿ ನಿಮ್ಮಲ್ಲಿಯೇ ಇರುತ್ತಾರೆ ಎಂದು ಹೇಳಿದ್ದಾರೆ ಎಂದರು. ಈ ವಿಷಯದ ಬಗ್ಗೆ ಸದಸ್ಯರೊಳಗೆ ಬಾರಿ ಚರ್ಚೆ ನಡೆಯಿತು. ಈ ಬಗ್ಗೆ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಮಧ್ಯೆ ಪ್ರವೇಶಿಸಿ ಮಾತನಾಡಿ, ನಾನೊಬ್ಬ ಸರಕಾರಿ ಸಂಬಳ ಪಡೆಯುವವನ್ನು ಮೇಲಾಧಿಕಾರಿಗಳ ಅದೇಶದ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಉತ್ತರಿಸಿದರು.
ಸುಳ್ಯಪದವಿನಿಂದ ಬೆಳಗ್ಗೆ 8 ಗಂಟೆಗೆ ಸರ್ಕಾರಿ ಬಸ್.ಹೊರಡಲಿ;-
ಪುತ್ತೂರು- ಸುಳ್ಯಪದವು ರೋಟ್ ನಲ್ಲಿ ಶಾಲಾ ಮಕ್ಕಳಿಗೆ ಅನುಕೂಲಕ್ಕಾಗಿ ಬೆಳಗ್ಗೆ ಗಂ 8 ಕ್ಕೆ ಸುಳ್ಯಪದವಿನಿಂದ ಪುತ್ತೂರಿಗೆ ಬಸ್ ಹೊರಡುವ ವ್ಯವಸ್ಥೆ ಆಗಬೇಕು. ಪ್ರಸ್ತುತ ಈ ಬಸ್ 8.25 ಕ್ಕೆ ಹೊರಡುತ್ತದೆ ಇದರಿಂದ ಕೆಲವೊಂದು ಕಾಲೇಜು ಮಕ್ಕಳಿಗೆ ಸರಿಯಾದ ಅವಧಿಗೆ ತಲುಪಲು ಕಷ್ಟಕರವಾಗಿದೆ ಈ ನಿಟ್ಟಿನಲ್ಲಿ 8 ಗಂಟೆಗೆ ಸುಳ್ಯಪದವಿಂದ ಹೊರಡುವಂತೆ ಡಿಪೋ ಮೆನೇಜರ್ ರವರಿಗೆ ಬರೆಯಲು ಸದಸ್ಯ ವೆಂಕಟೇಶ್ ಕನ್ನಡ್ಕ ಒತ್ತಾಯಿಸಿದರು. ಈ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಬಳಿಕ 15 ಹಣಕಾಸು ಯೋಜನೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ರವಿರಾಜ ರೈ, ಶ್ರೀಮತಿ ಕನ್ನಡ್ಕ, ಸಂತೋಷ್ ಆಳ್ವ, ಹೇಮಾವತಿ ಬಿ, ಲಿಂಗಪ್ಪ, ಗೌಡ, ವಸಂತ ಕೆ, ದಮಯಂತಿ, ರವಿಚಂದ್ರ ಎಸ್ ಎನ್, ಸವಿತಾ, ಸುಶೀಲ ಪಿ, ಕುಮಾರ ಎ, ಜ್ಯೋತಿ, ಎ, ಕಲಾವತಿ ಪಿ ಎಸ್, ಪದ್ಮನಾಭ, ವೆಂಕಟೇಶ ಕೆ, ಧರ್ಮೇಂದ್ರ ಪಿ, ಸುಜಾತ ಎಸ್ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ, ವಂದಿಸಿ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳು ಸಹಕರಿಸಿದರು.
ReplyReply allForward |