ಸರ್ವೆ ಷಣ್ಮುಖ ಯುವಕ ಮಂಡಲದಿಂದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ-ಗ್ರಾಮದ ವಿವಿಧ ಕಡೆಗಳಲ್ಲಿ ಒಂದೊಂದು ಹಿಡಿ ಮಣ್ಣು ಸಂಗ್ರಹ

0

ಪುತ್ತೂರು: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಭಾರತ ಸರಕಾರ, ನೆಹರು ಯುವ ಕೇಂದ್ರ ಮಂಗಳೂರು ಇವುಗಳ ಸಹಕಾರದೊಂದಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಹಾಗೂ ಗ್ರಾಮ ಪಂಚಾಯತ್ ಮುಂಡೂರು ಇವುಗಳ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ್ ಹಾಗೂ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಡಿಯಲ್ಲಿ ನಡೆಯುವ ’ಅಮೃತ ಕಲಶ’ ಕಾರ್ಯಕ್ರಮಕ್ಕೆ ಮುಂಡೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಚಂದ್ರಶೇಖರ ಎನ್.ಎಸ್.ಡಿ ಯವರು ಕಲಸಕ್ಕೆ ಒಂದು ಹಿಡಿ ಫಲವತ್ತಾದ ಮಣ್ಣು ತುಂಬುವುದರ ಮೂಲಕ ಚಾಲನೆ ನೀಡಿದರು. ಬಳಿಕ ಗ್ರಾಮದ ವಿವಿದ ಕಡೆಗಳಿಂದ ಒಂದೊಂದು ಹಿಡಿ ಮಣ್ಣನ್ನು ಸಂಗ್ರಹಿಸಲಾಯಿತು. ದೇಶದ ಪ್ರತೀ ಗ್ರಾಮಗಳಿಂದ ಸಂಗ್ರಹಿಸ್ಪಟ್ಟ ಈ ಮಣ್ಣು ದೇಶದ ರಾಜದಾನಿ ದೆಹಲಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ನಿರ್ಮಾಣವಾಗಲಿರುವ ಬೃಹತ್ ಪಾರ್ಕ್‌ಗಾಗಿ ಬಳಸಲಾಗುತ್ತದೆ.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಗೌತಮ್‌ರಾಜ್ ಕರುಂಬಾರು, ಪ್ರಧಾನ ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಕರುಂಬಾರು, ಪರಿಸರ ಮತ್ತು ಕೃಷಿ ಕಾರ್ಯದರ್ಶಿ ನಾಗೇಶ್ ಪಟ್ಟೆಮಜಲು, ಕಾರ್ಯಕಾರಿ ಸಮಿತಿ ಸದಸ್ಯರಾದ ತಿಲಕ್‌ರಾಜ್ ಕರುಂಬಾರು ಮತ್ತು ರಾಮಣ್ಣ ಪೂಜಾರಿ ಭಕ್ತಕೋಡಿ ಹಾಗೂ ಸುಶೀಲ ಚಂದ್ರಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here