ಪುತ್ತೂರು: ಮನೋರಂಜನೆಗಳು ವಿಭಿನ್ನ ರೀತಿಯವು. ರೋಟರಿ ಯುವ ಕ್ಲಬ್ ನಿಂದ ಇದೀಗ ಮೂರನೆ ಬಾರಿ ಟ್ರೆಷರ್ ಹಂಟ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅ. 8 ರಂದು ನಡೆಯುವ ಈ ಸ್ಫರ್ಧೆ ಸಂತ ಫಿಲೋಮಿನಾ ಹೈಸ್ಕೂಲ್ ಬಳಿ ಆರಂಭಗೊಂಡು ಹೊರವಲಯದ ಮರೀಲು ದಿ ಪುತ್ತೂರು ಕ್ಲಬ್ ನಲ್ಲಿ ಕೊನೆಗೊಳ್ಳಲಿದೆ.
ಕುಟುಂಬದ ಸದಸ್ಯರು ಜೊತೆಗೂಡಿ ಭಾಗವಹಿಸಬಹುದಾದ ಆಟದಲ್ಲಿ ಎರಡು ಅಥವಾ ಮೂರು ಸ್ಪರ್ಧಿಗಳು ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರಸ್ತೆ ನಿಯಮಗಳನ್ನು ಪಾಲಿಸುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಡುವ ಆಟವೇ “ಟ್ರೆಷರ್ ಹಂಟ್”. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಕೂಡ ದೊರೆಯಲಿದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ರೋಟರಿಯಿಂದ ಪ್ರಮಾಣಪತ್ರ ಸಹ ನೀಡಲಾಗುವುದು.
ಪ್ರತಿಯೊಂದು ತಂಡಕ್ಕೂ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆಯನ್ನು ನೀಡಿ ಅದರಲ್ಲಿ ನೀಡಿರುವ ಕ್ಲೂ(ಸುಳಿವು)ಗಳನ್ನು ಗಮನಿಸಿ, ಟ್ವಿಸ್ಟ್ ಪ್ರಶ್ನೆಗಳಿಗೆ ಉತ್ತರಿಸುವುದು. ಪ್ರಾಯೋಜಕತ್ವ ನೀಡಿರುವ ಪುತ್ತೂರಿನ ವ್ಯಾಪಾರ ಮಳಿಗೆಗಳಲ್ಲಿ ಟ್ರೆಷರ್ ಅನ್ನು ಸಂಗ್ರಹಿಸುವುದು. ನೀಡಿರುವ ಗಿಫ್ಟ್ ಗಳನ್ನು ಪಡೆದುಕೊಂಡು ಕೊನೆಗೆ ಪುತ್ತೂರು ಕ್ಲಬ್ ನ್ನು ತಲುಪುವುದು. ಸ್ಪರ್ಧೆಯ ಕೊನೆಯಲ್ಲಿ ತೀರ್ಪುಗಾರರು ಪ್ರಶ್ನೆಗಳ ಸರಿ ಉತ್ತರಗಳನ್ನು ಮೌಲ್ಯಮಾಪನ ಮಾಡಿ, ಗರಿಷ್ಟ ಅಂಕಗಳನ್ನು ಪಡೆದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು. ಈ ವಿಭಿನ್ನ ರೀತಿಯ ಮನೋರಂಜನೆಯ ಆಟದಲ್ಲಿ ಭಾಗವಹಿಸಲಿಚ್ಛಿಸುವವರು ವಿನೀತ್ ಶೆಣೈ 9448125671, ನರಸಿಂಹ ಪೈ 9743703147, ಪಶುಪತಿ ಶರ್ಮ 9845522020 ಇವರಲ್ಲಿ ನೋಂದಾಯಿಸಿ ಭಾಗವಹಿಸಬಹುದು.