ಕಾವು: ಸುಳ್ಯ ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸ.ಹಿ.ಪ್ರಾ. ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

0

ಪುತ್ತೂರು: ಸುಳ್ಯದ ಕುರಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ ಇದರ ವತಿಯಿಂದ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಲಾಯಿತು.


ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅ.2 ರಂದು ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದರು. ಕೆವಿಜಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಜಯಪ್ರಕಾಶ ಕೆ, ಕಾವು ಲಯನ್ಸ್ ಕ್ಲಬ್‌ನ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಮವಮೋಹನ ಬನಾರಿ, ಸೇವಾ ಸಂಗಮ ಸಲಹಾ ಸಮಿತಿ ಸದಸ್ಯರೂ, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿ, ಶಾಲಾ ಎಸ್.ಡಿ.ಎಂ.ಸಿ, ಅಧ್ಯಕ್ಷ ಯತಿನ್ ಪೂಜಾರಿ ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಬಿಳಿನೆಲೆ, ಎನ್‌ಎಸ್‌ಎಸ್ ಸೇವಾ ಸಂಗಮದ ಅಧ್ಯಕ್ಷ ರಕ್ಷಿತ್ ಬೊಳ್ಳೂರು , ಕಾರ್ಯದರ್ಶಿ ವಿಶ್ವಕಿರಣ್, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ , ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here