ಪುತ್ತೂರು:ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿ ಜೈಲಲ್ಲಿರುವ ಅಪರಾಽ ರವಿ ಎಂಬಾತನನ್ನು ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ 27 ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬAಽಸಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡಲು ಆದೇಶಿಸುವಂತೆ ಬಾಡಿ ವಾರಂಟ್ ಕೋರಿ ಪುತ್ತೂರು ಗ್ರಾಮಾಂತರ ಪೊಲೀಸರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಗುರುಪ್ರಸಾದ್ ರೈ ಮನೆಯಲ್ಲಿ ನಡೆದಿದ್ದ ದರೋಡೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ, ಕೇರಳದ ಇಚಿಲಂಕೋಡು ಕುಂಪಳ ಪಚ್ಚಂಬಳ ನಿವಾಸಿ ಸುಬ್ಬ ಎಂಬವರ ಪುತ್ರ ರವಿ ಎಂಬಾತನನ್ನು ತಮ್ಮ ಕಸ್ಟಡಿಗೆ ನೀಡಲು ಕಾರಾಗೃಹ ಅಽಕಾರಿಗಳಿಗೆ ಆದೇಶಿಸುವಂತೆ ಕೋರಿ ಪೊಲೀಸರು ಪುತ್ತೂರು ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದಾರೆ.ಕಾಸರಗೋಡು ಜಬ್ಬಾರ್ ಕೊಲೆ ಪ್ರಕರಣದಲ್ಲಿ ಅಪರಾಽಯಾಗಿ ಜೀವಾವಽ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಲ್ಲಿರುವ ರವಿ ದರೋಡೆ ಪ್ರಕರಣಕ್ಕೆ ಸಂಚು ರೂಪಿಸಿದ್ದ ವಿಚಾರವನ್ನು ಬಂಽತ ಇತರ ಆರೋಪಿಗಳಿಂದ ತಿಳಿದುಕೊಂಡಿದ್ದ ಪೊಲೀಸರು ಇದೀಗ ಆತನಿಗಾಗಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದಾರೆ.
ದರೋಡೆ ಪ್ರಕರಣಕ್ಕೆ ಸಂಬAಽಸಿದAತೆ ಅಹರ್ನಿಶಿ ಕಾರ್ಯಚರಣೆ ನಡೆಸಿದ್ದ ಪೊಲೀಸರು ಕೊನೆಗೂ 6 ಮಂದಿ ಕುಖ್ಯಾತ ಅಂರ್ರಾಜ್ಯ ದರೋಡೆಕೋರರನ್ನು ಬಂಽಸಿದ್ದರು.ಸೆ.7ರ ಮುಂಜಾನೆ ಗುರುಪ್ರಸಾದ್ ರೈಯವರ ಮನೆಗೆ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ದರೋಡೆಕೋರರ ತಂಡ ಗುರುಪ್ರಸಾದ್ ರೈ ಮತ್ತವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಹಾಕಿ, ಮಾರಕಾಸಗಳಿಂದ ಬೆದರಿಸಿ 30 ಸಾವಿರ ರೂ.ನಗದು ಮತ್ತು 2.4 ಲಕ್ಷ ರೂ.ಮೌಲ್ಯದ (8 ಪವನ್)ಚಿನ್ನಾಭರಣ ದೋಚಿತ್ತು.ಘಟನೆಗೆ ಸಂಬAಽಸಿ ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ|ಗಾನಾ ಪಿ.ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮಾಂತರ ವೃತ್ತನಿರೀಕ್ಷಕ ಬಿ.ಎಸ್.ರವಿ ಅವರ ಮೂಲಕ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ 22 ದಿನಗಳ ಅಹರ್ನಿಶಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಅಂರ್ರಾಜ್ಯ ದರೋಡೆಕೋರರನ್ನು ಬಂಽಸುವಲ್ಲಿ ಯಶಸ್ವಿಯಾಗಿ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೇರಳ ಕಾಸರಗೋಡಿನ ಮಂಜೇಶ್ವರ ಗ್ರಾಮದ ಪೈವಳಿಕೆಯ ಜನಾರ್ದನ ಎಂಬವರ ಪುತ್ರ ಕಿರಣ್ ಟಿ(29ವ),ಬಂಟ್ವಾಳ ಗ್ರಾಮದ ಪೆರುವಾಯಿ ಕಿಣಿಯರಪಾಲು ನಿವಾಸಿ ಶ್ರೀಧರ ಮಣಿಯಾಣಿ ಎಂಬವರ ಪುತ್ರ ಸುಽರ್ ಕುಮಾರ್ ಕೆ ಯಾನೆ ಕಬಡ್ಡಿ ಸುಽರ್(38ವ),ಕಾಂಞಗಾಡ್ ಪದನ್ನಕಾಡು ಮೂವರಿಕಂಡು ಕಂಡತ್ತಿಲ್ ವೀಡು ನಿವಾಸಿ ರವಿ ಕೆ.ವಿ ಅವರ ಪುತ್ರ ಸನಾಲ್ ಕೆ.ವಿ(34ವ),ಕಾಸರಗೋಡು ಎಡನಾಡು ಗ್ರಾಮದ ಸೀತಂಗೋಳಿ ರಾಜೀವಗಾಂಽ ಕಾಲೋನಿ ದಿ.ಬಡುವ ಕುಂಞÂ ಅವರ ಪುತ್ರ ಮಹಮ್ಮದ್ -ಝಲ್(37ವ),ಸೈಯದ್ ಜಮಾಲ್ ಅವರ ಪುತ್ರ ಅಬ್ದುಲ್ ನಿಝಾರ್(21ವ),ಮಂಜೇಶ್ವರ ಶೇಣಿ ಹೊಸಗದ್ದೆ ನಿವಾಸಿ ನಾರಾಯಣ ಅವರ ಪುತ್ರ ವಸಂತ ಎಂ(31ವ.)ಬAಽತ ಆರೋಪಿಗಳು.ಬಂಽತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬAಟ್ವಾಳ ತಾಲೂಕಿನ ವಿಟ್ಲ ಪೆರುವಾಯಿಯ ಸುಽರ್ ಮಣಿಯಾಣಿ ಯಾನೆ ಕಬಡ್ಡಿ ಸುಽರ್ ಈ ಪ್ರಕರಣದ ಸೂತ್ರಧಾರಿಯಾಗಿದ್ದ.ಈ ಹಿಂದೆ ಕುದ್ಕಾಡಿಯಲ್ಲಿ ಗುರುಪ್ರಸಾದ್ ರೈಯವರ ಮನೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದಕ್ಕೆ ಕೇರಳದಿಂದ ಕಾರಿನಲ್ಲಿ ಬಂದಿದ್ದ ಗುರುಪ್ರಸಾದ್ ರೈಯವರ ಸಂಬAಽಕರಿಗೆ ಕಾರು ಚಾಲಕನಾಗಿ ಸುಽರ್ ಮಣಿಯಾಣಿ ಆಗಮಿಸಿದ್ದರು.ಹೀಗೆ ಒಂದೆರಡು ಸಲ ಆ ಮನೆಗೆ ಬಂದಿದ್ದ ಸುಽರ್ ಮಣಿಯಾಣಿ ಗುರುಪ್ರಸಾದ್ ರೈ ಅವರ ಪರಿಚಯ ಮಾಡಿಕೊಂಡಿದ್ದನಲ್ಲದೆ ಗುರುಪ್ರಸಾದ್ ರೈಯವರ ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ.ಈತನೇ ದರೋಡೆಕೋರರ ತಂಡಕ್ಕೆ ಮನೆಯ ಮಾಹಿತಿ ನೀಡಿದ್ದ.ಈ ದರೋಡೆ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಮುಖ ಆರೋಪಿ ರವಿ ಕಾಸರಗೋಡು ಜಬ್ಬಾರ್ ಕೊಲೆ ಪ್ರಕರಣದಲ್ಲಿ ಅಪರಾಽಯಾಗಿ ಜೀವಾವಽ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ.ಈತ ಪೆರೋಲ್ ರಜೆಯಲ್ಲಿ ಬಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದ.ಪೆರೋಲ್ ರಜೆ ಮುಗಿಸಿ ಹೋಗಿ ಪ್ರಸ್ತುತ ಕಣ್ಣೂರು ಜೈಲಿನಲ್ಲಿದ್ದಾನೆ.
ದರೋಡೆ ಪ್ರಕರಣಕ್ಕೆ ಸಂಬAಽಸಿ ವಿಚಾರಣೆಗಾಗಿ, ಕಣ್ಣೂರು ಸೆಂಟ್ರಲ್ ಜೈಲಲ್ಲಿರುವ ರವಿಯನ್ನು ತಮ್ಮ ಕಸ್ಟಡಿಗೆ ನೀಡಲು ಕಾರಾಗೃಹ ಅಽಕಾರಿಗಳಿಗೆ ಆದೇಶಿಸುವಂತೆ ಕೋರಿ ಪೊಲೀಸರು ಇದೀಗ ಬಾಡಿ ವಾರಂಟ್ಗಾಗಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಈ ಕುರಿತು ಇನ್ನಷ್ಟೆ ಆದೇಶ ಮಾಡಬೇಕಿದೆ.
Home Uncategorized ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣ: ಕಣ್ಣೂರು ಜೈಲಲ್ಲಿರುವ ರವಿಗಾಗಿ ಪೊಲೀಸರಿಂದ ಬಾಡಿವಾರಂಟ್ಗೆ ಅರ್ಜಿ