ವಿದ್ಯಾಮಾತಾದಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ, ಉದ್ಯೋಗ ಮಾಹಿತಿ ,ಉಚಿತ ತರಬೇತಿಗೆ ನೋಂದಣಿ ಪ್ರಾರಂಭ

0

ಪುತ್ತೂರು : ಪಿಯು ,ಡಿಗ್ರಿ , ಸ್ನಾತಕೋತ್ತರ ಪದವಿ ಬಳಿಕ ಮುಂದೇನು…? ವಿದ್ಯಾಭ್ಯಾಸದ ನಂತರ ನಾವೇನು ಮಾಡಬೇಕು? ಅನ್ನೋ ಯೋಚನೆ ವಿದ್ಯಾರ್ಥಿಗಳಲ್ಲಿ ಸಹಜ .
ಇವೆಲ್ಲಾ ಗೊಂದಲ ನಿವಾರಿಸಲು ಅ. 15 ರಂದು 9:30- 3:30 ತನಕ ಸುಳ್ಯದ ವಿದ್ಯಾಮಾತಾ ಅಕಾಡೆಮಿ ಕಛೇರಿಯಲ್ಲಿ ಉಚಿತ ಕಾರ್ಯಗಾರ ನಡೆಯಲಿದೆ.


ಐಎಎಸ್ , ಕೆಎಎಸ್ , ಬ್ಯಾಂಕಿಂಗ್ , ಎಸ್.ಡಿ .ಎ ಮತ್ತು ಎಫ್.ಡಿ.ಎ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಹೇಗೆ ? ನೇಮಕಾತಿಗಳ ವಿವರ , ಪ್ರಶ್ನೆಪತ್ರಿಕೆಗಳ ಸ್ವರೂಪ – ಪರೀಕ್ಷೆ ಇವೆಲ್ಲದರ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಸಿಗಲಿದೆ.
ಅಲ್ಲದೇ ಖಾಸಗಿ ಉದ್ಯೋಗಗಳಿಗೆ ಪ್ರಯತ್ನಿಸುವವರಿಗಾಗಿ ಕಂಪನಿಗಳ ನೇರ ಸಂದರ್ಶನವನ್ನು ಎದುರಿಸುವ ಬಗ್ಗೆ , ಉದ್ಯೋಗ ಕೌಶಲ್ಯತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು.


ವಿದ್ಯಾಮಾತಾ ಅಕಾಡೆಮಿ ಮೂಲಕ ಸಾವಿರಾರು ಆಭ್ಯರ್ಥಿಗಳೂ ಬ್ಯಾಂಕಿಂಗ್, ಪೊಲೀಸ್, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ನೂರಾರು ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಸೇರಿರುವುದನ್ನು ಸ್ಮರಿಸಿಕೊಳ್ಳಬಹುದು. ಇದೀಗ ಸುಳ್ಯ, ಕೊಡಗು, ಕಾಸರಗೋಡು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಖಾಸಗಿ ಉದ್ಯೋಗಗಳಿಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕೆಂಬ ಯೋಜನೆಯೊಂದಿಗೆ ಉಚಿತ ಕಾರ್ಯಗಾರವನ್ನು ಅಕಾಡೆಮಿ ವತಿಯಿಂದ ಆಯೋಜಿಸಲಾಗಿದೆ. ನೋಂದಾವಣೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಅ. 12 ರ ಮೊದಲು ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.
ಇಲ್ಲವೇ , 9448527606 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here