ಪುತ್ತೂರು:ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಇದರ ಅಂಗಸಂಸ್ಥೆಯಾದ ಪುತ್ತೂರು ಕೊಂಬೆಟ್ಟು ಮರಾಟಿ ಮಹಿಳಾ ವೇದಿಕೆ ಇದರ 2023 – 24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆಯು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಮರಾಟಿ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಚೇತನಾ ಲೋಕಾನಂದ ಬನ್ನೂರು, ಉಪಾಧ್ಯಕ್ಷರಾಗಿ ಉಷಾ ಬಾಬು ನಾಯ್ಕ್ ತೆಂಕಿಲ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರಿ ದುಗ್ಗಪ್ಪ ಬಡಾವು ಮತ್ತು ಕೋಶಾಧಿಕಾರಿಯಾಗಿ ಮೀನಾಕ್ಷಿ ಮಂಜುನಾಥ್ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಯಾಗಿ ವಸಂತಿ ದರ್ಬೆ, ಸಂಘಟನಾ ಕಾರ್ಯದರ್ಶಿಗಳಾಗಿ ಮೋಹಿನಿ ಬಲ್ನಾಡು, ಕುಸುಮಾವತಿ ಕುಂಬ್ರ, ಗೌರಿ ಬರೆಪ್ಪಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ಲಲಿತಾ ಅಶೋಕ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಲೀಲಾವತಿ ನಾರಾಯಣ, ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪೂವಪ್ಪ ನಾಯ್ಕ ಕುಂಞಕುಮೇರು ಮತ್ತು ಲೋಕಾನಂದ ನಾಯ್ಕ್ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಮಂಜುನಾಥ ಎನ್.ಎಸ್ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಶೋಕ್ ಬಲ್ನಾಡು. ಕೋಶಾಧಿಕಾರಿ ಬಾಬು ನಾಯ್ಕ್ , ನಿಕಟಪೂರ್ವ ಅಧ್ಯಕ್ಷ ಯಮುನಾ ವೈ.ಕೆ. ನಾಯ್ಕ್ ಪಟ್ಟೆ, ನಿಕಟಪೂರ್ವ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಗೌರಿ ಬರೆಪ್ಪಾಡಿ, ನಿಕಟಪೂರ್ವ ಕೋಶಾಧಿಕಾರಿ ಲಲಿತಾ. ವೈ, ಮತ್ತು ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.