ಪುತ್ತೂರು ಸ.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ‌ʼಕಾಮರ್ಸ್‌ ಫೆಸ್ಟ್-2023ʼ

0

ಪುತ್ತೂರು: ವಿದ್ಯಾರ್ಥಿ ಸಮುದಾಯ ಸಿನಿಕರಾಗದೆ ಯಂತ್ರಗಳನ್ನು ಕಳಚಿ ಸಂವೇದನಾಶೀಲರಾಗಬೇಕು. ಭಾವನಾತ್ಮಕವಾಗಿ ಯೋಚಿಸುವಂತಾಗಬೇಕು. ಯುವ ಸಮುದಾಯ ಖಿನ್ನತೆಗೆ ಒಳಗಾಗದೇ ಮಾನವೀಯ ವಿಷಯದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಪುತ್ತೂರು ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪದ್ಮನಾಭ ಅವರು ಹೇಳಿದ್ದಾರೆ. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ‘ ಕಾಮರ್ಸ್ ಫೆಸ್ಟ್ – 2023’ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ದಿನದ ಅವಧಿಯ ಕಾಮರ್ಸ್ ಫೆಸ್ಟಿನ್ನು ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಗೋಪಾಲಕೃಷ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕಾಲೇಜಿನ ಶೈಕ್ಷಣಿಕ ಅಭಿವೃದ್ದಿಗೆ ಇಂಥಹ ಹಬ್ಬಗಳು ಚೈತನ್ಯದಾಯಕವಾಗಿರುತ್ತದೆ. ಪಠ್ಯದ ಜೊತೆಗೆ ವಿದ್ಯಾರ್ಥಿಗಳನ್ನು ವ್ಯವಹಾರಿಕವಾಗಿ ಚುರುಕುಗೊಳಿಸುವ ಇಂತಹ ಸ್ಪರ್ಧೆಗಳು ಪಠ್ಯಕ್ಕೆ ಪೂರಕವಾಗಿರಬೇಕು” ಎಂದು ಹೇಳಿದರು. ಸಮಾರಂಭದಲ್ಲಿ ಆಂತರಿಕ ಭರವಸಾ ಕೋಶದ ಸಂಚಾಲಕ ಪ್ರೊ.ಐವನ್ ಲೋಬೋ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಸ್ಟೀಫನ್ ಕ್ವಾಟ್ರಸ್ ,
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಜಯರಾಮ್, ಕಾರ್ಯಕ್ರಮದ ಸಂಯೋಜಕ ಡಾ.ಸುಕೇಶ್ ಅವರು ಭಾಗವಹಿಸಿದ್ದರು. ಕು.ವೈಷ್ಣವಿ ಕಾರ್ಯಕ್ರಮ ನಿರೂಪಿಸಿ, ಕು.ಬೃಂದ ವಂದಿಸಿದರು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿಯ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂತಿಮ ಪದವಿಯ ವಿದ್ಯಾರ್ಥಿಗಳು ಈ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here