ಪುತ್ತೂರು: ಅ.9ರಿಂದ 11ರ ತನಕ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ಅಜಿತ್ ಸಿ. ಹಾಗೂ ಅಖಿಲೇಶ್ ಅ.6ರಂದು ದೆಹಲಿಗೆ ತೆರಳಲಿದ್ದಾರೆ.
ಭಾರತ ಸರಕಾರದ ಡಿಪಾರ್ಟ್‌ಮೆಂಟ್ ಆಫ್ ಸೈಯನ್ಸ್ ಆಂಡ್ ಟೆಕ್ನಾಲಜಿ ನ್ಯಾಷನಲ್ ಇನ್ನೋವೇಷನ್ ಫೌಂಡೇಶನ್ ಇಂಡಿಯಾ ಇವರ ಸಹಯೋಗದಲ್ಲಿ ಇನ್‌ಸ್ಪೈರ್ ಅವಾರ್ಡ್-ಮಾನಕ್ ಇವರು ನಡೆಸುವ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
a novel product from areca sheet to prevent reverberation ಎಂಬ ವಿಷಯದಲ್ಲಿ ಅಜಿತ್ ಸಿ. (ಅಜಲಡ್ಕ ನಿವಾಸಿ ಚನಿಯಪ್ಪ ನಾಯ್ಕ ಮತ್ತು ಗೀತಾ ದಂಪತಿ ಪುತ್ರ.) ಯವರು ಪ್ರಾಜೆಕ್ಟ್ ತಯಾರಿಸಿದ್ದಾರೆ. ಇವರಿಗೆ ಶಾಲಾ ಗಣಿತ ಶಿಕ್ಷಕಿ ವಿದ್ಯಾಲಕ್ಷ್ಮೀ ಎ.ರವರು ಮಾರ್ಗದರ್ಶನ ನೀಡಿರುತ್ತಾರೆ.
ಅಖಿಲೇಶ್ (ಉಪ್ಪಳಿಗೆ ನಿವಾಸಿ ದುಗ್ಗಪ್ಪ ಮತ್ತು ಭವಾನಿ ದಂಪತಿ ಪುತ್ರ)ರವರು,a novel product from calycopteris floribunda to repell pests ಎಂಬ ವಿಷಯದಲ್ಲಿ ಪ್ರಾಜೆಕ್ಟ್ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವನಿಗೆ ವಿಜ್ಞಾನ ಶಿಕ್ಷಕಿ ಸವಿತಾ ಕೆ ರವರು ಮಾರ್ಗದರ್ಶನ ನೀಡಿರುತ್ತಾರೆ.