ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ದೇಶಾದ್ಯಾಂತ ಶೌರ್ಯ ಜಾಗರಣ ರಥಯಾತ್ರೆ ಆರಂಭಗೊಂಡಿದ್ದು, ರಾಜ್ಯದಲ್ಲಿ ಸೆ.25ರಿಂದ ಅ.10 ರ ತನಕ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ. ಈ ರಥಯಾತ್ರೆಯು ಅ.7ರಂದು ಪುತ್ತೂರಿಗೆ ಆಗಮಿಸಿದ್ದು, ಬೊಳುವಾರಿನಲ್ಲಿ ರಥವನ್ನು ಸ್ವಾಗತಿಸಿಸಲಾಯಿತು.ಮುಗೆರೋಡಿ ಬಾಲಕೃಷ್ಣ ರೈ ಚಾಲನೆ ನೀಡಿದರು. ಶೋಭಯಾತ್ರೆಯಲ್ಲಿ ಶಂಖನಾದ, ಭಜನೆ, ಕೀರ್ತನೆಗಳು, ಅನಾದಿ ಕಾಲದಿಂದಲೂ ಹಿಂದು ಪರ ಹೋರಾಟದಲ್ಲಿ ಶೌರ್ಯ ಮೆರೆದವರನ್ನು ನೆನಪಿಸುವ ನಿಟ್ಟಿನಲ್ಲಿ ಅವರ ವೇಷಧರಿಸಿದ ಕಾರ್ಯಕರ್ತರು ಸೇರಿದಂತೆ ಸಾಂಸ್ಕೃತಿಕ ಧಾರ್ಮಿಕ ರೀತಿಯಲ್ಲಿ ಶೋಭಾಯಾತ್ರೆ ನಡೆಯುತ್ತಿದೆ. ಶೋಭಯಾತ್ರೆಗೆ ಅಲ್ಲಲ್ಲಿ ಹಿಂದುಗಳು ಪುಷ್ಪಾರ್ಚಣೆ ಮಾಡುತ್ತಿದ್ದಾರೆ.ಶೋಭಾಯಾತ್ರೆಯ ಬಳಿಕ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ಸಮಾವೇಶ ನಡೆಯಲಿದೆ.
ಸೆ.25ಕ್ಕೆ ಚಿತ್ರದುರ್ಗದಿಂದ ಶೌರ್ಯ ಜಾಗರಣ ರಥಯಾತ್ರೆ ಆರಂಭಗೊಂಡಿದ್ದು, ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಎಲ್ಲಾ ಜಿಲ್ಲೆಗಳ ಮೂಲಕ ಹಾದು ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ ಮೂಲಕ ಪುತ್ತೂರಿಗೆ ಆಗಮಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ್ ಸು.ರಾಮಣ್ಣ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದ ಸ್ವಾಗತ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ ಮತ್ತು ವಿಶ್ವಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯವಾಹ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.