ಕಾಣಿಯೂರು : ಅಮೃತ ಭಾರತಿ ವಿದ್ಯಾಸಂಸ್ಥೆಗಳು ಹೆಬ್ರಿ ಇಲ್ಲಿ ಅ 8 ರಂದು ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರ್ಟಿಸ್ಟಿಕ್ ಯೋಗದಲ್ಲಿ ಸಾನ್ವಿಕ ಎಚ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶೇರ ಯಾದವ ಎಚ್ ಮತ್ತು ಶಿಕ್ಷಕಿ ವೀಣಲತಾ ದಂಪತಿಗಳ ಪುತ್ರಿ. ಪ್ರಾಥಮಿಕ ವಿಭಾಗದ ಬಾಲಕಿಯರ ಸಾಂಪ್ರದಾಯಿಕ ಯೋಗದಲ್ಲಿ ಶ್ರೀಮಾ ಕೆ ಎಚ್ ಚತುರ್ಥ ಸ್ಥಾನ ಪಡೆದಿರುತ್ತಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತ ದಂಪತಿಗಳ ಪುತ್ರಿ. ಪ್ರಾಥಮಿಕ ವಿಭಾಗದ ಬಾಲಕರ ಸಾಂಪ್ರದಾಯಿಕ ಯೋಗದಲ್ಲಿ ಮೋನಿಶ್ ತಂಟೆಪ್ಪಾಡಿ ಚತುರ್ಥ ಸ್ಥಾನ ಪಡೆದಿರುತ್ತಾರೆ. ಇವರು ಸುಳ್ಯ ತಾಲೂಕಿನ ಕಳಂಜ ಗ್ರಾಮದ ವಿಶ್ವನಾಥ ಮತ್ತು ದಯಾಮಣಿ ದಂಪತಿಗಳ ಪುತ್ರ.
ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ತರಬೇತಿ ನೀಡಿರುತ್ತಾರೆ.
ವಿಜೇತರನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಶಾಲಾ ಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕವೃಂದದವರು ಅಭಿನಂದಿಸಿದರು.