ನರಿಮೊಗರು ಶಾಲೆಯಲ್ಲಿ ಸವಣೂರು ವಲಯ ಮಟ್ಟದ ಕ್ರೀಡಾಕೂಟ

0

ಪುತ್ತೂರು: ಸವಣೂರು ವಲಯ ಮಟ್ಟದ ಕ್ರೀಡಾಕೂಟ ನರಿಮೊಗರು ಪ್ರಾ. ಶಾಲಾ ಕ್ರೀಡಾಂಗಣದಲ್ಲಿ ಅ.6ರಂದು ನಡೆಯಿತು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಧ್ವಜಾರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ದಾನಿಗಳಾದ ಲೋಕಪ್ಪ ಗೌಡ ಹಾಗೂ ನಳಿನಿ ಲೋಕಪ್ಪ ಗೌಡ ದಂಪತಿಗಳು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಮಾತನಾಡಿ 10 ವರ್ಷಗಳ ಬೇಡಿಕೆಯಾದ ಸುಸಜ್ಜಿತ ಕ್ರೀಡಾಂಗಣ ರಚನೆಯನ್ನು ಗ್ರಾ.ಪಂ ವತಿಯಿಂದ ಈ ಬಾರಿ ನೆರವೇರಿಸುವುದಾಗಿ ಭರವಸೆ ನೀಡಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿರವರು ಕಾರ್ಯಕ್ರಮದ ಸಂಘಟನೆ ಹಾಗೂ ಆಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು. ಶಾಲಾ ನಾಯಕಿ ಚಿಂತನಾ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಗಣ್ಯರಾದ ವೇದನಾಥ ಸುವರ್ಣ, ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿ ಸುಂದರ ಗೌಡರವರು, ಉಸ್ಮಾನ್ ನೆಕ್ಕಿಲು, ಗಂಗಾಧರ ಸುವರ್ಣ, ವಿಜಯ, ಉಮೇಶ್ ಕರ್ಕೇರಾ, ಶಿಕ್ಷಣ ಸಂಯೋಜಕರಾದ ಅಮೃತ ಕಲಾ, ಎಸ್‌ಡಿಎಂಸಿ ಅಧ್ಯಕ್ಷರಾದ ಕೃಷ್ಣರಾಜ ಜೈನ್, ಪ್ರವೀಣ್ ಆಚಾರ್ಯ, ಸಲೀಂ ಮಾಯಂಗಳ, ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ವಿನೋದ್ ಕೆಯ್ಯೂರು, ಸವಣೂರು ವಲಯದ ನೋಡೆಲ್ ಅಧಿಕಾರಿಗಳಾದ ಸಹದೇವ ಮತ್ತು ಬಾಲಕೃಷ್ಣ ಸವಣೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ರೈ, ಮೋನಪ್ಪ ಪಟ್ಟೆ, ಮುಖ್ಯ ಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ನಿಂಗರಾಜು, ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷರಾದ ಮಾಮಚ್ಚನ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವೇಶ್ವರ ಭಟ್, ನರಿಮೊಗರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುಧಾಕರ ಕುಲಾಲ್, ವಾರ್ಡ್ ಸದಸ್ಯರಾದ ಪ್ರತಿಮಾ ರೈ, ಸಿಆರ್‌ಪಿಗಳಾದ ಪರಮೇಶ್ವರಿ, ಶಶಿಕಲಾ, ಯಶೋಧ,ಸವಣೂರು ವಲಯದ ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಗುರುಗಳು, ಸಹಶಿಕ್ಷಕರು, ಕ್ರೀಡಾಪಟುಗಳು, ಎಸ್‌ಡಿಎಂಸಿ ಸದಸ್ಯರು,ಪೋಷಕರು, ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಪ್ರಭಾರ ಮುಖ್ಯಗುರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಸ್ನೇಹಲತಾ ವಂದಿಸಿದರು. ಜೋಸ್ಲಿನ್ ಪಸನ್ಹ, ದಿವ್ಯ ಹಾಗೂ ಶ್ರೀಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕರಾದ ಸುಮನ, ಸುರೇಖಾ ಹಾಗೂ ಮಂಜುಳಾರವರು ಸಹಕರಿಸಿದರು.

LEAVE A REPLY

Please enter your comment!
Please enter your name here